ಮಹಿಳಾ ಪೇದೆಗೆ ಸಿಎಂ ಅಭಿನಂದನೆ

Cm kumaraswamy Congratulated women constable with tweet

07-06-2018

ಬೆಂಗಳೂರು: ದೊಡ್ಡತೂಗೂರು ಬಳಿಯ ಪೊದೆಯಲ್ಲಿ ಪತ್ತೆಯಾದ ಅನಾಥ ಮಗುವಿಗೆ ಎದೆ ಹಾಲುಣಿಸಿ ಜನರ ಮೆಚ್ಚುಗೆಗೆ ಪಾತ್ರವಾಗಿರುವ ಮಹಿಳಾ ಪೇದೆ ಅರ್ಚನಾರನ್ನು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅಭಿನಂದಿಸಿದ್ದಾರೆ.

ಅನಾಥ ಮಗುವಿಗೆ ಹಾಲುಣಿಸಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿರುವ ಅರ್ಚನಾ ಅವರನ್ನು ಶೀಘ್ರದಲ್ಲೇ ಭೇಟಿ ಮಾಡುತ್ತೇನೆ. ತಾಯಿ ಕರುಣೆ ತೋರಿದ ಪೇದೆ ಅರ್ಚನಾರ ಕಳಕಳಿ ಮತ್ತು ಕಾಳಜಿಗೆ ಅಭಿನಂದಿಸುತ್ತೇನೆ ಎಂದು ಟ್ವೀಟ್‍ನಲ್ಲಿ ಹೇಳಿದ್ದಾರೆ.

ಇನ್ನು ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್ ಅವರು ನಿನ್ನೆ ಎಲೆಕ್ಟ್ರಾನಿಕ್ ಸಿಟಿ ಠಾಣೆ ಪೇದೆ ಅರ್ಚನಾರನ್ನು ಭೇಟಿಯಾಗಿ ಅಭಿನಂದಿಸಿದ್ದಾರೆ. ಕಳೆದ ವಾರ ದೊಡ್ಡತೂಗೂರು ಬಳಿ ಪೊದೆಯಲ್ಲಿ ಗಂಡು ಶಿಶು ಪತ್ತೆಯಾಗಿತ್ತು. ಸಾರ್ವಜನಿಕರ ಮೂಲಕ ಮಾಹಿತಿ ಬಂದ ಹಿನ್ನೆಲೆಯಲ್ಲಿ ಎಲೆಕ್ಟ್ರಾನಿಕ್ ಸಿಟಿ ಠಾಣೆ ಹೊಯ್ಸಳ ಪೊಲೀಸರು ಸ್ಥಳಕ್ಕೆ ಧಾವಿಸಿ ಮಗುವನ್ನು ರಕ್ಷಿಸಿದ್ದರು. ಅಳುತ್ತಿದ್ದ ಮಗುವಿಗೆ ಎದೆ ಹಾಲುಣಿಸಿ ಪೇದೆ ಅರ್ಚನಾ ಮಾನವೀಯತೆ ಮೆರೆದಿದ್ದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ