ಪೇದೆಯ ಅನೈತಿಕ ಸಂಬಂಧ: ಬಯಲಾಯ್ತು ವೀಡಿಯೋ!

Illegal Relationship of police constable: video viral

07-06-2018 535

ಬೆಂಗಳೂರು: ಅನೈತಿಕ ಸಂಬಂಧ ಹಿನ್ನೆಲೆಯಲ್ಲಿ ಚಿತ್ರದುರ್ಗ ಜಿಲ್ಲೆಯ ಕೆ.ಕೆ ಹಟ್ಟಿ ಗ್ರಾಮಸ್ಥರಿಂದ ಧರ್ಮದೇಟು ತಿಂದಿದ್ದ ರಾಮನಗರ ಪೊಲೀಸ್ ಪೇದೆಯ ಮಹಿಳೆಯೊಂದಿಗಿನ ಅನೈತಿಕ ಸಂಬಂಧದ ವೀಡಿಯೋ ವೈರಲ್ ಆಗಿದೆ.

ರಾಮನಗರ ಸಂಚಾರ ಪೊಲೀಸ್ ಠಾಣೆಯ ಚಾಲಕನಾಗಿ ಕಾರ್ಯ ನಿರ್ವಹಿಸುತ್ತಿದ್ದ ಡಿಎಆರ್ ಪೇದೆ ಲೋಕೇಶ್ ಯುವತಿಯೊಬ್ಬಳ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದು ಆಕೆಯನ್ನ ಚಿತ್ರದುರ್ಗದ ಹಿರಿಯೂರು ತಾಲ್ಲೂಕಿನ ಕೆಕೆ ಹಟ್ಟಿ ಗ್ರಾಮದ ಯುವಕನ ಜೊತೆ ವಿವಾಹ ಮಾಡಿಕೊಡಲಾಗಿತ್ತು.

ಮದುವೆಯಾದ ಬಳಿಕವೂ ಪೇದೆ ಲೋಕೇಶ್ ಮಹಿಳೆಯ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದನು. ಅಲ್ಲದೇ ಇದೇ ತಿಂಗಳ 3ರಂದು ಮಹಿಳೆಯನ್ನ ನೋಡಲು ಕೆಕೆ ಹಟ್ಟಿಗೆ ಹೋಗಿದ್ದ ವೇಳೆ ಗ್ರಾಮಸ್ಥರೇ ಹಿಡಿದು ಲೋಕೇಶ್‍ಗೆ ಧರ್ಮದೇಟು ನೀಡಿದ್ದರು. ಇದೀಗ ಲೋಕೇಶ್ ಹಾಗೂ ಮಹಿಳೆಯ ನಡುವಿನ ಅನೈತಿಕ ಸಂಬಂಧದ ವಿಡಿಯೋ ಹಾಗೂ ಫೋಟೋಗಳು ವೈರಲ್ ಆಗಿವೆ.

ಈ ಸಂಬಂಧ ರಾಮನಗರ ಎಸ್‍ಪಿ ರಮೇಶ್ ಭಾನೋತ್ ಮಾತನಾಡಿ, ಚಿತ್ರದುರ್ಗ ಎಸ್.ಪಿ ಜೊತೆ ಈಗಾಗಲೇ ಚರ್ಚೆ ಮಾಡಲಾಗಿದೆ. ಅಲ್ಲಿಂದ ವರದಿ ಬಂದ ನಂತರ ಪೇದೆ ಲೋಕೇಶ್ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇನೆ. ವೀಡಿಯೋ ವೈರಲ್ ಆಗಿರುವ ಬಗ್ಗೆ ಮಾಹಿತಿ ಇಲ್ಲ ವರದಿ ಬಂದ ತಕ್ಷಣ ಕ್ರಮ ಜರುಗಿಸುವುದಾಗಿ ತಿಳಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Trafic Police Constable ವೀಡಿಯೋ ಅನೈತಿಕ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ