‘ಈಗ ಚುನಾವಣೆ ನಡೆದರೂ 150ಸ್ಥಾನ ಗೆಲ್ಲುತ್ತೇವೆ’- ಶ್ರೀರಾಮುಲು07-06-2018

ಚಿತ್ರದುರ್ಗ: 'ರಾಜ್ಯದ ಮುಖ್ಯಮಂತ್ರಿ ನಾಡಿನ ಜನರ ಆಶೀರ್ವಾದಿಂದ ಮುಖ್ಯಮಂತ್ರಿ ಆಗಿದ್ದೆ ಅಂದಿದ್ದರು. ಈಗ ಮಾತು ಬದಲಾಗಿದೆ' ಎಂದು ಜಿಲ್ಲೆಯ ಮೊಳಕಾಲ್ಮೂರು ಕ್ಷೇತ್ರದ ಶಾಸಕ ಬಿ.ಶ್ರೀರಾಮುಲು ಹೇಳಿದ್ದಾರೆ. ಮೊಳಕಾಲ್ಮೂರಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರದ ಸಚಿವ ಸಂಪುಟದ ಗೊಂದಲಗಳನ್ನು ರಾಜ್ಯದ ಜನ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಈ ಸರ್ಕಾರಕ್ಕೆ ಆಯಸ್ಸು ಇಲ್ಲ, ಅವರವರ ನಡುವೆಯೇ ಜಗಳ-ಕಚ್ಚಾಟಗಳು ನಡೆಯುತ್ತಿವೆ' ಎಂದು ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.  

'ನಾವು ಚುನಾವಣೆಗೆ ಹೋಗಲು ರೆಡಿ ಇದ್ದೇವೆ, ಈಗ ಚುನಾವಣೆ ನಡೆದರೂ 150ಸ್ಥಾನ ಗೆಲ್ಲಲು ಬಿಜೆಪಿ ಶಕ್ತವಾಗಿದೆ. ಆಡಳಿತ ಪಕ್ಷ ಏನೇ ತೊಂದರೆ ಮಾಡಿದರು ಹೋರಾಟ ಮಾಡಲು ಸಿದ್ಧರಿದ್ದೇವೆ. ಸಾಲಮನ್ನಾ ವಿಚಾರದಲ್ಲಿ ಕುಮಾರಸ್ವಾಮಿ ಜನರ ಕಿವಿಯಲ್ಲಿ ಹೂ ಇಡಲು ಮುಂದಾಗಿದ್ದಾರೆ. ನಮ್ಮ ಮೊದಲ ಆದ್ಯತೆ ಸಾಲಮನ್ನಾ, ಇಲ್ಲವಾದರೆ ತೀವ್ರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

B. Sriramulu Government ಸಚಿವ ಸಂಪುಟ ಸೂಕ್ಷ್ಮ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ನಿಮ್ ಜೊತೆ ನಾನ್ ಇದ್ದೀನಿ ಬಾಸ್ ಏನ್ ಬೇಕಾದ್ರು ಮಾಡ್ತಿನಿ
  • Mp
  • Former