‘ಬಿಎಸ್ ವೈ ಇಂದ ಯಾವ ಪತ್ರವೂ ನನಗೆ ಬಂದಿಲ್ಲ’-ಸಿಎಂ07-06-2018

ಬೆಂಗಳೂರು: ‘ಯಡಿಯೂರಪ್ಪನವರಿಂದ ಹಣ ಪಾವತಿಸಿಕೊಳ್ಳುವಷ್ಟು ದರಿದ್ರ ನಮ್ಮ ಸರ್ಕಾರಕ್ಕೆ ಬಂದಿಲ್ಲ' ಎಂದು ಬಿ.ಎಸ್.ಯಡಿಯೂರಪ್ಪ ವಿರುದ್ಧ ವಿಧಾನಸೌಧದಲ್ಲಿ ಸಿಎಂ ಕುಮಾರಸ್ವಾಮಿ ಕಿಡಿಕಾರಿದ್ದಾರೆ. ಯಡಿಯೂರಪ್ಪ ಪ್ರಯಾಣ ಮಾಡಿದ ಹೆಲಿಕಾಪ್ಟರ್ ವೆಚ್ಚವನ್ನು ಪ್ರಸ್ತಾಪಿಸಿ ಸಿಎಂ ಕುಮಾರಸ್ವಾಮಿ ಅವರು ದುಂದುವೆಚ್ಚ ಎಂಬ ಹೇಳಿಕೆ ನೀಡಿದ್ದರು. ಇದರಿಂದ ಗರಂ ಆದ ಬಿ.ಎಸ್ ಯಡಿಯೂರಪ್ಪ ವೆಚ್ಚದ ಹಣವನ್ನು ಭರಿಸಲು ತಾನು ಸಿದ್ಧರಿರುವುದಾಗಿ ಪತ್ರ ಬರೆದಿದ್ದಾರೆ ಎನ್ನಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿದ ಸಿಎಂ ಕುಮಾರಸ್ವಾಮಿ ವಿಶೇಷ ವಿಮಾನದಲ್ಲಿ ಪ್ರಯಾಣ ಮಾಡಿದರೆ 30ಲಕ್ಷ ಹಣ ಬೇಕು, ಜನರ ತೆರಿಗೆ ಹಣ ಪೋಲಾಗುತ್ತದೆ ಎಂದು ಹೇಳಿದ್ದೆ. ಯಡಿಯೂರಪ್ಪ ಬರೆದಿರುವ ಯಾವ ಪತ್ರವೂ ನನಗೆ ಬಂದಿಲ್ಲ ಎಂದು ಹೇಳಿದರು.

‘ನಾನು ದೆಹಲಿಗೆ ವಿಶೇಷ ವಿಮಾನದಲ್ಲಿ ಹೋಗಿದ್ದರೆ 40ಲಕ್ಷ ಖರ್ಚಾಗುತ್ತಿತ್ತು. ಆದರೆ, ನಾನು ಹೋಗಿಲ್ಲ. ನಾನು ದುಂದು ವೆಚ್ಚದ ಕಡಿಮೆ‌ ಮಾಡೋದರ ಬಗ್ಗೆ ಹೇಳಿದ್ದೆ ಅಷ್ಟೆ ಹೊರತು ಯಡಿಯೂರಪ್ಪನರನ್ನು ಟೀಕೆ ಮಾಡಲು ಅದನ್ನು ಹೇಳಿಲ್ಲ ಎಂದರು.


ಸಂಬಂಧಿತ ಟ್ಯಾಗ್ಗಳು

H.D.Kumaraswamy B.S.Yeddyurappa ದರಿದ್ರ ದುಂದುವೆಚ್ಚ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ