ಕಾಲಾ: ಪ್ರತಿಭಟನೆಗೆ ಹೆದರಿ ಮೊದಲ ಶೋ ರದ್ದು!

07-06-2018
ಬೆಂಗಳೂರು: ಕನ್ನಡ ಪರ ಸಂಘಟನೆಗಳ ಹೋರಾಟಕ್ಕೆ ಹೆದರಿ ಇಂದು ಅನೇಕ ಕಡೆ ರಜನಿಕಾಂತ್ ಅಭಿನಯದ ಕಾಲಾ ಸಿನೆಮಾ ಪ್ರದರ್ಶನಗೊಂಡಿಲ್ಲ. ಕನ್ನಡ ಪರ ಕಾರ್ಯಕರ್ತರ ಹೋರಾಟಕ್ಕೆ ಮಣಿದ ಥಿಯೇಟರ್ ಮಾಲೀಕರು, ಬಹುತೇಕ ಥಿಯೇಟರ್ ಗಳಲ್ಲಿ ಕಾಲಾ ಸಿನೆಮಾದ ಮೊದಲ ಶೋ ರದ್ದು ಮಾಡಿದ್ದರು. ಶ್ರೀರಾಂಪುರದ ಅರುಣಾ ಥಿಯೇಟರ್ ನಲ್ಲೂ ಪ್ರದರ್ಶನ ರದ್ದುಗೊಂಡಿತ್ತು. ಇನ್ನು ಪ್ರದರ್ಶನಕ್ಕೆ ಸಿದ್ಧತೆ ನಡೆಸಿದ್ದ ಕೆಲವು ಥಿಯೇಟರ್ ಮಾಲೀಕರು ಪ್ರತಿಭಟನೆಗಳಾಗುವ ಸಾಧ್ಯತೆಗಳು ಹೆಚ್ಚಿದ್ದರಿಂದ ಪ್ರದರ್ಶನ ರದ್ದುಗೊಳಿಸಿದ್ದರು.
ಟ್ರಿನಿಟಿ ಸರ್ಕಲ್ ಬಳಿ ಇರುವ ಲಿಡೋ ಮಾಲ್ ನಲ್ಲಿ ಕೂಡ ಕಾಲಾ ಸಿನೆಮಾ ಪ್ರದರ್ಶನ ರದ್ದು ಮಾಡಲಾಗಿತ್ತು. 10ಗಂಟೆಗೆ ಆರಂಭವಾಗಬೇಕಿದ್ದ ಶೋ, ಕನ್ನಡ ಪರ ಸಂಘಟನೆಗಳ ಪ್ರತಿಭಟನೆ ಹಿನ್ನೆಲೆ ಮಾಲ್ ಮಾಲೀಕರು ಪ್ರದರ್ಶನ ರದ್ದುಗೊಳಿಸಿದ್ದರು. ಸಿನೆಮಾ ನೋಡಲೆಂದು ಬಂದಿದ್ದ ರಜನಿಕಾಂತ್ ಅಭಿಮಾನಿಗಳು ನಿರಾಸೆಯಿಂದ ಹಿಂದಿರುಗಿದರು. ಇನ್ನು ನಾಳೆಯಿಂದ ಸಿನೆಮಾ ಪ್ರದರ್ಶನ ಮಾಡಲು ನಿರ್ಧರಿಸಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ.
ಒಂದು ಕಮೆಂಟನ್ನು ಹಾಕಿ