ರಕ್ಕಸ ಮಂಗಗಳ ಕಾಟಕ್ಕೆ ಬೆಚ್ಚಿಬಿದ್ದಿರುವ ಜನ

Monkeys attacking on people at bidar

07-06-2018

ಬೀದರ್: ನಗರದ ಕುಂಬಾರವಾಡ ಬಡಾವಣೆ ನಿವಾಸಿಗರು ಮಂಗಗಳ ಕಾಟಕ್ಕೆ ಬೇಸತ್ತಿದ್ದಾರೆ. ಬಡಾವಣೆಯ ತುಂಬೆಲ್ಲ ಓಡಾಡುವ, ಚೇಷ್ಟೆ ಮಾಡುವ ರಕ್ಕಸ ಮಂಗಗಳು ಇದುವರೆಗೂ 20ಕ್ಕೂ ಅಧಿಕ ಜನರ ಮೇಲೆ ಅಟ್ಯಾಕ್ ಮಾಡಿವೆ. ಮೂರು ವರ್ಷದ ಮಗುವಿನ ಮೇಲೆಯೂ ಮಾರಣಾಂತಿಕ ದಾಳಿ ಮಾಡಿವೆ. ಈ ಘಟನೆಯಿಂದ ಬೆಚ್ಚಿಬಿದ್ದಿರುವ ಜನ ಮನೆ ಬಿಟ್ಟು ಆಚೆ ಬರಲೂ ಸಹ ಭಯಪಡುತ್ತಿದ್ದಾರೆ. ಜನರ ಮೇಲೆ ಮಂಗಗಳು ದಾಳಿ ಮಾಡುತ್ತಿದ್ದರೂ ಅರಣ್ಯ ಇಲಾಖೆ ಡೊಂಟ್ ಕೇರ್ ಪ್ರದರ್ಶಿಸಿದೆ. ಒಂದು ವರ್ಷದಿಂದಲೂ ಇದೇ ರೀತಿ ನಡೆಯುತ್ತಿದ್ದು, ಎಷ್ಟೇ ಮನವಿ, ದೂರು ಸಲ್ಲಿಸಿದರು ಅರಣ್ಯ ಇಲಾಖೆ ತಲೆಕೆಡಿಸಿಕೊಳ್ಳದೆ ಕಣ್ಮುಚ್ಚಿ ಕುಳಿತುಕೊಂಡಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಈ‌ ಸಂಕಷ್ಟದಿಂದ ಪಾರು ಮಾಡುವಂತೆ ಬಡಾವಣೆ ನಿವಾಸಿಗಳು ಗೋಳಾಡುತ್ತಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Monkey attack ಬಡಾವಣೆ ಸಂಕಷ್ಟ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ