‘ಕಾಲಾ’ ಬಿಡುಗಡೆಗೆ ದಾವಣಗೆರೆಯಲ್ಲೂ ಬ್ರೇಕ್!

Kaala Movie has not released in davangere theaters!

07-06-2018

ದಾವಣಗೆರೆ: ನಟ ರಜನಿಕಾಂತ್ ಅಭಿನಯದ ಕಾಲಾ ಚಿತ್ರ ಬಿಡುಗಡೆಗೆ ದಾವಣಗೆರೆಯಲ್ಲೂ ಬ್ರೇಕ್ ಬಿದ್ದಿದೆ. ಕನ್ನಡಪರ ಸಂಘಟನೆಗಳ ಮನವಿಗೆ ಸ್ಪಂದಿಸಿರುವ ಥಿಯೇಟರ್ ಮಾಲೀಕರು ಚಿತ್ರ ಪ್ರದರ್ಶನಕ್ಕೆ ಮುಂದಾಗಲಿಲ್ಲ. ದಾವಣಗೆರೆಯ ಎರಡು ಚಿತ್ರಮಂದಿರಗಲ್ಲಿ ಕಾಲಾ ಚಿತ್ರ ಬಿಡುಗಡೆಗೆ ಕಾಲ‌ ನಿಗದಿಯಾಗಿತ್ತು. ಕಳೆದ ಒಂದು ವಾರದಿಂದ ಕರುನಾಡ ಸೇವಕರು ಮತ್ತು ಇತರೆ ಕನ್ನಡ ಪರ ಸಂಘಟನೆಗಳು ಥಿಯೇಟರ್ ಮಾಲೀಕರಿಗೆ ಚಿತ್ರ ಬಿಡುಗಡೆ ಮಾಡಬಾರದು ಎಂದು ಅಶೋಕ, ವಸಂತ ಥಿಯೇಟರ್ ಗಳಿಗೆ ಭೇಟಿ ನೀಡಿ ಮನವಿ ಮಾಡಿದ್ದರು. ಒಂದು ವೇಳೆ ಬಿಡುಗಡೆ ಮಾಡಿದರೆ, ಪರಿಣಾಮ ಎದುರಿಸಬೇಕಾಗತ್ತದೆ ಅನ್ನೋ ಎಚ್ಚರಿಕೆ ಸಹ ನೀಡಿದ್ದರು. ಹಾಗಾಗಿ ಚಿತ್ರ ಬಿಡುಗಡೆ ಹಿಂದೇಟು ಹಾಕುತ್ತಿರುವ ಥಿಯೇಟರ್ ಮಾಲೀಕರು, ಇಂದು ರಾಜ್ಯಾದ್ಯಂತ ಏನು ತೀರ್ಮಾನ ಕೈಗೊಳ್ಳುತ್ತಾರೋ ನೋಡಿಕೊಂಡು ಮುಂದಿನ ತೀರ್ಮಾನ ಪ್ರಕಟಿಸಲಿದ್ದೇವೆ ಎಂದು ತಿಳಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Kaala Rajinikanth ಥಿಯೇಟರ್ ಅಭಿನಯ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ