ಕನ್ನಡಿಗರ ಕೆಂಗಣ್ಣಿಗೆ ಗುರಿಯಾದ ಕಾಲ ಸಿನೆಮಾ!

Kaala movie and karnataka!

07-06-2018

ಬೆಂಗಳೂರು: ಸೂಪರ್ ಸ್ಟಾರ್ ರಜನಿಕಾಂತ್ ಸಿನೆಮಾಗಳೆಂದರೆ ಸಿನಿ ರಸಿಕರಿಗೆ, ಅಭಿಮಾನಿಗಳಿಗೆ ಹಬ್ಬ ಎಂದೇ ಹೇಳಬಹುದು. ಆದರೆ ರಾಜ್ಯದಲ್ಲಿ ಈ ಭಾರಿ ಈ ರೀತಿಯ ವಾತಾವರಣ ಕಂಡುಬಂದಿಲ್ಲ. ರಜನಿಕಾಂತ್ ಪ್ರತಿ ಸಿನೆಮಾಗಳು ಮಧ್ಯ ರಾತ್ರಿಯಿಂದಲೇ ಪ್ರದರ್ಶನ ಕಾಣುತ್ತಿದ್ದವು. ಆದರೆ ಕಲಾ ಸಿನೆಮಾ ಬಿಡುಗಡೆಗೆ ಕನ್ನಡಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿ ಹಿನ್ನೆಲೆ, ಬೆಳ್ಳಂಬೆಳಗ್ಗಿನ ಪ್ರದರ್ಶನಗಳೂ ಇಲ್ಲ. ಪ್ರಮುಖ ಚಿತ್ರಮಂದಿರಗಳ ಮುಂದೆ ಪೋಸ್ಟರ್ ಸಹ ಇಲ್ಲ. ವಿತರಕರ ಪ್ರಕಾರ ಇಂದು ಕೆಲವೆಡೆ ಬೆಳಗ್ಗೆ ಸಿನಿಮಾ ಪ್ರದರ್ಶನವಾಗುತ್ತದೆ ಅನ್ನೊ ಮಾತು ಕೇಳಿ ಬಂದಿತ್ತು. ಬೆಂಗಳೂರಿನ ಊರ್ವಶಿ, ಪೂರ್ಣಿಮಾ ಚಿತ್ರಮಂದಿರ ಸೇರಿದಂತೆ ಹಲವೆಡೆ ಇಲ್ಲಿಯವರೆಗೂ ಸಿನೆಮಾ ಪ್ರದರ್ಶನಕ್ಕೆ ಪ್ಲಾನ್ ಮಾಡಿಲ್ಲ ಎಂದು ತಿಳಿದು ಬಂದಿದೆ.

ಇನ್ನು ಕಾಲಾ ಸಿನೆಮಾ ಕೆ.ಜಿ ರಸ್ತೆಯ ಭೂಮಿಕಾ ಚಿತ್ರಮಂದಿರದಲ್ಲಿ ಪ್ರದರ್ಶನ ಇಲ್ಲ. ಕಾಲಾ ಸಿನಿಮಾ ಬದಲು ಬೇರೆ ಸಿನಿಮಾ ಪ್ರದರ್ಶನವಿದ್ದರೂ ಭೂಮಿಕಾ ಚಿತ್ರಮಂದಿರಕ್ಕೆ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಈ ಹಿಂದೆ ರಜನಿಕಾಂತ್ ಕಾವೇರಿ ವಿಚಾರದಲ್ಲಿ ಹೇಳಿಕೆ ನೀಡಿದ್ದರು, ಆದ್ದರಿಂದಲೇ ಕಾಲಾ ಸಿನೆಮಾ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದೆ ಎಂಬ ಮಾತುಗಳೂ ಸಹ ಕೇಳಿಬರುತ್ತಿವೆ.


ಸಂಬಂಧಿತ ಟ್ಯಾಗ್ಗಳು

Kaala Rajinikanth ಬಿಡುಗಡೆಗೆ ಸೂಪರ್ ಸ್ಟಾರ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ