‘ಪೇಜಾವರ ಶ್ರೀಗಳು ಟೀಕೆ ಮಾಡಿಲ್ಲ, ಸಲಹೆ ನೀಡಿದ್ದಾರೆ’-ಸೊಗಡು ಶಿವಣ್ಣ07-06-2018

ತುಮಕೂರು: ಕೇಂದ್ರ ಬಿಜೆಪಿ ಸರ್ಕಾರದ ಕುರಿತು ಪೇಜಾವರ ಶ್ರೀಗಳ ಹೇಳಿಕೆಯನ್ನು ಸಮರ್ಥಿಸಿಕೊಂಡ ಮಾಜಿ‌ ಸಚಿವ ಸೊಗಡು‌ ಶಿವಣ್ಣ, ‘ಮೋದಿ ಸರ್ಕಾರ ಕುರಿತು ಪೇಜಾವರ ಶ್ರೀಗಳು ಸಲಹೆ ನೀಡಿದ್ದಾರೆ ಅಷ್ಟೆ. ಪ್ರಣಾಳಿಕೆಯಲ್ಲಿ ಹೇಳಿದ ಕಾರ್ಯಕ್ರಮಗಳು ಬೇಗನೆ ಜಾರಿ ಮಾಡುವಂತೆ ಹೇಳಿದ್ದಾರೆ. ಅದರ ಹೊರತಾಗಿ ಅವರು ಮೋದಿ ಸರ್ಕಾರವನ್ನು ಟೀಕೆ ಮಾಡಿಲ್ಲ ಎಂದು ಹೇಳಿದ್ದಾರೆ. ದೇಶ, ಧರ್ಮದ ಬಗ್ಗೆ, ಅನಾದಿಕಾಲದಿಂದ ಇದ್ದ ನಂಬಿಕೆ ಉಳಿಸಿ ಬೆಳೆಸಿಕೊಂಡ ಬಂದ ಮಹಾನುಭಾವರು ಪೇಜಾವರ ಶ್ರೀಗಳು, ಅಂತಹವರ ಸಲಹೆಯನ್ನೇ ಟೀಕೆ ಎಂದು ಬಿಂಬಿಸಲಾಗುತ್ತಿದೆ. ರಾಜರ ಆಡಳಿತದಲ್ಲಿ ಋಷಿ ಮುನಿಗಳು ಸಲಹೆ ನೀಡೋದು ಭಾರತದ ಇತಿಹಾಸ. ಅದೇ ರೀತಿ ಮೋದಿ ಅವರಿಗೆ ಪೇಜಾವರ ಶ್ರೀ ಸಲಹೆ ನೀಡಿದ್ದಾರೆ’ ಎಂದು ಸಮರ್ಥಿಸಿಕೊಂಡರು.

ಪೇಜಾವರ ಶ್ರೀಗಳಿಗೆ ಕೇಂದ್ರ ಸರ್ಕಾರದ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಇರಲಿಲ್ಲ, ಸಂಸದೆ ಶೋಭಾ ಕರಂದ್ಲಾಜೆ  ಕೇಂದ್ರದ ಕಾರ್ಯಕ್ರಮಗಳ ಬಗ್ಗೆ  ಶ್ರೀಗಳಿಗೆ ಮಾಹಿತಿ ನೀಡಬಹುದಿತ್ತು. ಷರಿಷತ್ ವಿಪಕ್ಷನಾಯಕ ಕೆ.ಎಸ್.ಈಶ್ವರಪ್ಪ ಕೂಡಾ ಪೇಜಾವರ ಶ್ರೀಗಳ ಒಡನಾಡಿ, ಅವರು ಕೂಡಾ ಕೇಂದ್ರ ಸರ್ಕಾರದ ‌ಸಾಧನೆ ಬಗ್ಗೆ ಶ್ರೀಗಳಿಗೆ ವಿವರಿಸಬಹುದಿತ್ತು. ಶ್ರೀಗಳಿಗೆ ಮಾಹಿತಿ ಇಲ್ಲದೆ ಈ ರೀತಿ ಸಲಹೆ ನೀಡಿದ್ದಾರೆ ಎಂದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ