‘ಇಂದು ಅಥವಾ ನಾಳೆ ಖಾತೆಗಳ ಹಂಚಿಕೆ’-ಡಿಸಿಎಂ06-06-2018

ಬೆಂಗಳೂರು: 'ತಮಗೆ ತಿಳಿದಿರೋ ಹಾಗೆ ಇದು ಸಮ್ಮಿಶ್ರ ಸರ್ಕಾರ. ಯಾವುದೇ ತೀರ್ಮಾನ ಕೈಗೊಳ್ಳಬೇಕಾದರೂ ‌ಕೆಲ ಸಮಯ ಬೇಕಾಗುತ್ತದೆ. ರಾಜ್ಯದ ಜನತೆಗೆ ಉತ್ತಮ‌ ಆಡಳಿತ  ಕೊಡುತ್ತೇವೆ ಅನ್ನೋ ಭದ್ಧತೆ ಮಾತನ್ನ‌ ನೀಡಿದ್ದೇವೆ' ಎಂದು ಡಿಸಿಎಂ ಜಿ.ಪರಮೇಶ್ವರ್ ಹೇಳಿದ್ದಾರೆ. ರಸ್ತೆ ಗುಂಡಿ‌ಮುಚ್ಚುವ ಕಾರ್ಯ, ಕರಾವಳಿಗೆ ನೆರೆಗೆ ಪರಿಹಾರ ಹೀಗೆ ಅನೇಕ ಕೆಸಗಳನ್ನು ಸರ್ಕಾರ ಮಾಡಿದೆ ಎಂದರು.

ಇಂದು ‌ಸಚಿವ ಸಂಪುಟ ರಚನೆಯಾಗಿದ್ದು, ಇಂದು ಸಂಜೆ ಅಥವಾ ನಾಳೆ ಖಾತೆಗಳನ್ನು ಹಂಚಲಾಗುವುದು. ಬಳಿಕ ಆಯಾ ಸಚಿವರು ತಮ್ಮ ತಮ್ಮ ಜಿಲ್ಲೆ ಹಾಗೂ ಇಲಾಖೆಗಳಲ್ಲಿ ಕೆಲಸ ಶುರು ಮಾಡಲು ಇಂದಿನ ಸಭೆಯಲ್ಲಿ ಸೂಚನೆ ನೀಡಲಾಗಿದೆ. ಅಸಮಾಧಾನಿತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತೇವೆ. ಪಕ್ಷದೊಳಗೆ ಯಾವುದೇ ಗೊಂದಲ‌ ಇಲ್ಲ. ಇದಕ್ಕಾಗೇ ನಾವು ಆರು ಸ್ಥಾನಗಳನ್ನ ಉಳಿಸಿದ್ದೇವೆ, ಜೆಡಿಎಸ್ ನಲ್ಲಿ ಒಂದು ಸ್ಥಾನ ಬಾಕಿ ಉಳಿಸಿದ್ದೇವೆ ಎಂದು ತಿಳಿಸಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ