ಎಲ್ಲರ ಮನವೊಲಿಸಿ ಉತ್ತಮ ಆಡಳಿತ ನೀಡುತ್ತೇವೆ-ಸಿಎಂ

Kumaraswamy press meet at vidhana soudha

06-06-2018

ಬೆಂಗಳೂರು: ಹೊಸ ಸರ್ಕಾರ ರಚನೆಯಾಗಬೇಕಾದರೆ ಸಮಯ ಬೇಕಾಗುತ್ತದೆ ಅದರಂತೆ ಟೈಮ್‌ ನೀಡೋದು ಅವಶ್ಯಕ ಎಂದು ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ. ಪ್ರಮಾಣ ವಚನ ಸಮಾರಂಭದ ನಂತರ ವಿಧಾನಸೌಧದಲ್ಲಿ‌ ಸಿಎಂ ಕುಮಾರಸ್ವಾಮಿ ಸುದ್ದಿಗೋಷ್ಠಿ ನೆಡೆಸಿದರು.

ಒಂದೇ ಪಕ್ಷದ ಸರ್ಕಾರ ರಚನೆಯಲ್ಲೇ ಅನೇಕ‌ ಸಮಸ್ಯೆಗಳಿರುತ್ತವೆ, ಅದರಲ್ಲೂ ಸಮ್ಮಿಶ್ರ‌ ಸರ್ಕಾರದಲ್ಲಿ‌ ಸಚಿವ ಸಂಪುಟ ರಚನೆ ಸವಾಲು ಎಂದರು. ನಾವು ಕೆಲಸಗಳನ್ನ ಮಾಡಲು ಸಚಿವ ಸಂಪುಟ ರಚನೆಗೆ ಕಾಯಲಿಲ್ಲ. ಈಗಾಗಲೇ ಅಧಿಕಾರಿಗಳೊಂದಿಗೆ ಅನೇಕ ಸಭೆ ನಡೆಸಿದ್ದು ಕೆಲಸಗಳು ಪ್ರಾರಂಭವಾಗಿವೆ ಎಂದರು. 1500ಕ್ಕೂ ಹೆಚ್ಚು ರಸ್ತೆಗುಂಡಿಗಳನ್ನ ಮುಚ್ಚಲಾಗಿದೆ, ಸಿಎಂ-ಡಿಸಿಎಂ‌ ಸೇರಿದಂತೆ ಸಂಪುಟದಲ್ಲಿ 27ಸಚಿವರಿದ್ದಾರೆ. ಮೊದಲ ಔಪಚಾರಿಕ ಸಚಿವ ಸಂಪುಟ ಸಭೆ ನಡೆಸಿದ್ದೇವೆ. ಮುಂದಿನ‌ ದಿನಗಳಲ್ಲಿ ರಾಜ್ಯದ ಜನತೆಯನ್ನ ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ ಸರ್ಕಾರ ಮುಂದಿನ ಯೋಜನೆಗಳ ಬಗ್ಗೆ ಚರ್ಚೆ ನಡೆಸಲಿದೆ ಎಂದರು.

ಸಂಪುಟ ರಚನೆಯಾದಾಗ ಸಚಿವ ಸ್ಥಾನದಿಂದ ವಂಚಿತರಾದ ನಾಯಕರ, ಬೆಂಬಲಿಗರ ಆಕ್ರೋಶ ಸಾಮಾನ್ಯ. ಆದರೆ, ಎಲ್ಲರ ಮನವೊಲಿಸಿ ಮುಂದಿನ‌ ದಿನಗಳಲ್ಲಿ ಉತ್ತಮ ಆಡಳಿತ ನೀಡುವತ್ತ ಶ್ರಮಿಸುತ್ತೇವೆ ಎಂದು ತಿಳಿಸಿದರು.


ಸಂಬಂಧಿತ ಟ್ಯಾಗ್ಗಳು

Cabinet H.D.Kumaraswamy ವಿಶ್ವಾಸ ಯೋಜನೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ