ರಾಜಭವನಕ್ಕೆ ಅಭೂತಪೂರ್ವ ಬಂದೋಬಸ್ತ್ ಕಲ್ಪಿಸಿದ ಪೊಲೀಸ್

karnataka cabinet expansion: high security provided by police

06-06-2018

ಬೆಂಗಳೂರು: ನೂತನ ಸಚಿವರ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮ ನಡೆದ ರಾಜಭವನಕ್ಕೆ  ಅಭೂತಪೂರ್ವ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕೈಗೊಳ್ಳಲಾಗಿತ್ತು. ವಿಧಾನಸೌಧ, ರಾಜಭವನ ಸುತ್ತ ನಿಷೇಧಾಜ್ಞೆ ಕೂಡ ಜಾರಿಗೊಳಿಸಿ ಕಾರ್ಯಕ್ರಮ ನಡೆದ ಬುಧವಾರ ಮಧ್ಯಾಹ್ನ 2.12ಕ್ಕೆ ಎರಡು ಗಂಟೆ ಮುನ್ನ ರಾಜಭವನ ರಸ್ತೆಯಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿತ್ತು.

ಜನರಲ್ ತಿಮ್ಮಯ್ಯ ವೃತ್ತದಿಂದ ರಾಜಭವನ ಮಾರ್ಗದ ಕೊನೆಯವರೆಗೂ ಸಂಚಾರ ನಿರ್ಬಂಧಿಸಿ ಪರ್ಯಾಯ ಮಾರ್ಗವನ್ನು ವಾಹನ ಸವಾರರಿಗೆ ಸೂಚಿಸಲು ಪೊಲೀಸರನ್ನು ನಿಯೋಜಿಸಲಾಗಿತ್ತು.

ಬಂದೋಬಸ್ತ್‍ಗಾಗಿ ಓರ್ವ ಡಿಸಿಪಿ, ಮೂವರು ಎಸಿಪಿ, 7ಪಿಐ, 15ಎಸ್‍ಐ, 10ಕೆಎಸ್‍ಆರ್, ಸಿಎಆರ್ ತುಕಡಿ ಸೇರಿ 600ಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗೆ ನಿಯೋಜಿಸಿ ರಸ್ತೆಗೆ ಅಡ್ಡಲಾಗಿ ಬ್ಯಾರಿಕೇಡ್ ಅಳವಡಿಸಿ ಜನ ಹೆಚ್ಚಾಗಿ ಸೇರದಂತೆ ತಡೆಯಲಾಗಿತ್ತು. ರಾಜಭವನದ ಒಳಗೆ ಕೂಡ 1500 ಮಂದಿಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ಸಚಿವರಾಗುವ ಶಾಸಕರ ಕುಟುಂಬದ ಆಯ್ದ ಸದಸ್ಯರು ಶಾಸಕರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಇವರಿಗೆ ವಿಶೇಷ ಪಾಸ್ ವಿತರಿಸಲಾಗಿದೆ. ಉಳಿದಂತೆ ಅಭಿಮಾನಿಗಳಿಗೆ, ಪಕ್ಷದ ಕಾರ್ಯಕರ್ತರಿಗೆ ವೀಕ್ಷಣೆಗಾಗಿ ಬೃಹತ್ ಎಲ್‍ಇಡಿ ಸ್ಕ್ರೀನ್ ಅಳವಡಿಸಲಾಗಿತ್ತು ಜನ ರಸ್ತೆಯಲ್ಲೇ ನಿಂತು ಪ್ರಮಾಣವಚನ ಸಮಾರಂಭ ವೀಕ್ಷಿಸಿದರು.


ಸಂಬಂಧಿತ ಟ್ಯಾಗ್ಗಳು

cabinet expansion Police ಬಂದೋಬಸ್ತ್ ಪರ್ಯಾಯ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ