25ಮಂದಿ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ

karnataka cabinet expansion: 25 members sworn as Ministers

06-06-2018

ಬೆಂಗಳೂರು: ಪ್ರಮಾಣ ವಚನ ಸ್ವೀಕಾರ ಸಮಾರಂಭ ರಾಜಭನದ ಗಾಜಿನ ಮನೆಯಲ್ಲಿ ನಡೆಯಿತು. ರಾಜ್ಯಪಾಲ ವಜುಭಾಯಿ ವಾಲಾ ಪ್ರತಿಜ್ಞಾವಿಧಿ ಬೋಧಿಸಿದರು. ಮೊದಲ ಹಂತದ ಸಂಪುಟ ವಿಸ್ತರಣೆಯಲ್ಲಿ 25ಮಂದಿ ಸಚಿವರಾಗಿ ಪ್ರಮಾಣ ಸ್ವೀಕರಿಸಿದ್ದಾರೆ.

ಕಾರ್ಯಕ್ರಮಕ್ಕೆ ಪ್ರಜ್ವಲ್ ರೇವಣ್ಣ ತನ್ನ ಅಜ್ಜಿ ಚನ್ನಮ್ಮ ಜೊತೆಗೆ ಆಗಮಿಸಿದ್ದರು. ಇನ್ನು ಬ್ಯಾರಿಕೇಡ್ ಹಾರಿ ಬಂದ ಶರವಣಗೆ ಸೀಟು ಸಿಗದೆ ಮೊಣಕಾಲಲ್ಲಿ ಕುಳಿತರು. ಪ್ರಮಾಣ ವಚನ ನಂತರ ಸಾ.ರಾ.ಮಹೇಶ್ ಸಿಎಂ ಕಾಲಿಗೆ ಬಿದ್ದು ಆಶೀರ್ವಾದ ಪಡೆದರು. ಜಯಮಾಲ ಹೆಸರು ಪ್ರಸ್ತಾಪವಾದಾಗ ಸಭೆಯಲ್ಲಿ ಉದ್ಘಾರ ಮೊಳಗಿತು.

ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದವರು: ಹೆಚ್.ಡಿ ರೇವಣ್ಣ ಮೊದಲು ಪ್ರಮಾಣ ಸ್ವೀಕರಿಸಿದ್ದು, ದೇವರ ಹೆಸರಲ್ಲಿ ಸ್ವೀಕರಿಸಿದ್ದಾರೆ. ಆರ್.ವಿ.ದೇಶಪಾಂಡೆ, ಬಂಡೆಪ್ಪ ಕಾಶೆಂಪುರ ಇಬ್ಬರೂ ದೇವರ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಗರಿ ಗರಿ ರೇಷ್ಮೆ ಪಂಚೆ, ಶಲ್ಯ ತೊಟ್ಟು ಬಂದಿದ್ದ ಡಿ.ಕೆ ಶಿವಕುಮಾರ್ ಅಜ್ಜನ ಮತ್ತು ದೇವರ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಜಿ.ಟಿ ದೇವೇಗೌಡ ದೇವರು ಮತ್ತು ತಾಯಿ ಚಾಮುಂಡೇಶ್ವರಿ ಹೆಸರಲ್ಲಿ ಸ್ವೀಕರಿಸಿದ್ದಾರೆ. ಕೆ.ಜೆ.ಜಾರ್ಜ್, ಡಿ.ಸಿ.ತಮ್ಮಣ್ಣ, ಶಿವಶಂಕರ ರೆಡ್ಡಿ, ಎಸ್.ಆರ್ ಶ್ರೀನಿವಾಸ ವಾಸು, ವೆಂಕಟರಾವ್ ನಾಡಗೌಡ, ಪ್ರಿಯಾಂಕ್ ಖರ್ಗೆ ಇಷ್ಟೂ ಮಂದಿ ದೇವರ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಇನ್ನು ಕೃಷ್ಣ ಭೈರೇಗೌಡರು ಶ್ರದ್ಧಾಪೂರ್ವಕವಾಗಿ ಪ್ರತಿಜ್ಞೆ ಎಂದು ಹೇಳಿ ಸೀಮಿತಗೊಳಿಸಿದರು. ಎಂ.ಸಿ.ಮನಗೂಳಿ ಮನೆ ದೇವರ ಹೆಸರಲ್ಲಿ ಪ್ರಮಾಣ ಸ್ವೀಕರಿಸಿದರು. ಸಿ.ಎಸ್.ಪುಟ್ಟರಾಜು, ತಾಯಿ ಜಗನ್ಮಾತೆ ತ್ರಿಪುರ ಸುಂದರಿ ಹೆಸರಲ್ಲಿ, ಯು.ಟಿ.ಖಾದರ್ ದೇವರ ಹೆಸರಲ್ಲಿ, ಸಾ.ರಾ.ಮಹೇಶ್ ದೇವರ ಹೆಸರಲ್ಲಿ, ಜಮೀರ್ ಅಹ್ಮದ್ ತಾಯಿ ಮತ್ತು ಅಲ್ಲ ಹೆಸರಲ್ಲಿ ಇಂಗ್ಲಿಷ್ ನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಎನ್.ಮಹೇಶ್ ಬುದ್ಧ, ಬಸವ, ಅಂಬೇಡ್ಕರ್ ಹೆಸರಲ್ಲಿ, ಶಿವಾನಂದ ಪಾಟೀಲ್ ಅಣ್ಣ ಬಸವಣ್ಣನ ಹೆಸರಲ್ಲಿ, ವೆಂಕಟರಮಣಪ್ಪ ದೇವರ ಹೆಸರಲ್ಲಿ, ರಾಜಶೇಖರ್ ಬಸವರಾಜ್ ಪಾಟೀಲ ವೀರಭದ್ರೇಶ್ವರ ಹೆಸರಲ್ಲಿ, ಪುಟ್ಟರಂಗ ಶೆಟ್ಟಿ ದೇವರ ಹೆಸರಲ್ಲಿ, ಆರ್. ಶಂಕರ್ ಮನೆ ದೇವರಾದ ಮೈಲಾರಲಿಂಗೇಶ್ವರ, ಕೊನೆಯದಾಗಿ ಜಯಮಾಲಾ ದೇವರ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Vajubhai Vala Raj Bhavan ಗಾಜಿನ ಮನೆ ಮೊಣಕಾಲು


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ