‘ಅರಸು ಅವರಿಗೆ ಅರಸು ಅವರೇ ಸಾಟಿ’-ಸಿಎಂ

CM Kumaraswamy tribute to D.Devaraj urs

06-06-2018

ಬೆಂಗಳೂರು: ರಾಜ್ಯದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರು ಹಾಕಿ ಕೊಟ್ಟ ಮೇಲ್ಪಂಕ್ತಿ ಹಾಗೂ ಮಾರ್ಗದರ್ಶನದಂತೆ ದೇವರಾಜ ಅರಸು ಅವರ ಹೆಸರಿನಲ್ಲಿ ಸರ್ವರಿಗೂ ನ್ಯಾಯ ಒದಗಿಸುವ ಅರ್ಥಪೂರ್ಣ ಕಾರ್ಯಕ್ರಮಗಳನ್ನು ತಮ್ಮ ಸರ್ಕಾರ ರೂಪಿಸಿ ಅನುಷ್ಠಾನಕ್ಕೆ ತರಲಿದೆ ಎಂದು ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರು ಇಲ್ಲಿ ಇಂದು ಪ್ರಕಟಿಸಿದರು.

ಹಿಂದುಳಿದ ವರ್ಗಗಳ ಹರಿಕಾರ ಎಂದೇ ಹೆಸರಾಗಿದ್ದ ಡಿ.ದೇವರಾಜ ಅರಸು ಅವರ 36ನೇ ಪುಣ್ಯ ಸ್ಮರಣೆಯ ಸಂದರ್ಭದಲ್ಲಿ ವಿಧಾನಸೌಧದ ಪಶ್ಚಿಮ ದ್ವಾರದ ಬಳಿ ಇರುವ ಅರಸು ಅವರ ಪ್ರತಿಮೆಯ ಬಳಿ ಇರುವ ಭಾವಚಿತ್ರಕ್ಕೆ ಮುಖ್ಯಮಂತ್ರಿ ಪುಷ್ಟ ನಮನ ಸಲ್ಲಿಸಿ ಮಾತನಾಡಿ, ದೇವರಾಜ ಅರಸು ಅವರು ಕೇವಲ ಹಿಂದುಳಿದ ವರ್ಗಗಳ ನಾಯಕರಾಗಿರಲಿಲ್ಲ. ರಾಜ್ಯದ ಎಲ್ಲಾ ಜನತೆಯ ಸಮಗ್ರ ನಾಯಕರಾಗಿದ್ದರು. ಅರಸು ಅವರು ರೂಪಿಸಿದ್ದ ಜನಪರ ಕಾರ್ಯಕ್ರಮಗಳು ಅವರನ್ನು ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿದ ಮೇರು ಪರ್ವತವನ್ನಾಗಿಸಿತ್ತು. ಅರಸು ಅವರಿಗೆ ಅರಸು ಅವರೇ ಸಾಟಿ. ಅರಸು ಅವರು ಮಾಡಿದ ಕೆಲಸವನ್ನು ಬೇರಾರೂ ಮಾಡಲಾಗದು. ತಮ್ಮ ಸಮ್ಮಿಶ್ರ ಸರ್ಕಾರ ಅರಸು ಅವರ ಹೆಸರಿನಲ್ಲಿ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ಈ ನಾಡು ಕಂಡ ಮೇರು ರಾಜಕೀಯ ಮುತ್ಸದ್ಧಿಗೆ ಗೌರವ ಸಲ್ಲಿಸಲಿದೆ ಎಂದು ಕುಮಾರಸ್ವಾಮಿ ಅವರು ತಿಳಿಸಿದರು. ಈ ವೇಳೆ ಉಪ ಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್, ರಾಜ್ಯ ಸರ್ಕಾರದ ಉನ್ನತ ಅಧಿಕಾರಿಗಳು ಹಾಜರಿದ್ದರು.


ಸಂಬಂಧಿತ ಟ್ಯಾಗ್ಗಳು

H.D kumaraswamy Politics ಹರಿಕಾರ ಹಿಂದುಳಿದ ವರ್ಗ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ