ತಪ್ಪಿದ ಮಂತ್ರಿ ಪದವಿ ಹೊರಟ್ಟಿ ಸಿಟ್ಟು!

basavaraj horatti anger on jds?

06-06-2018

ಬೆಂಗಳೂರು: ಸಚಿವ ಸ್ಥಾನ ಸಿಗದಿದ್ದರಿಂದ ತೀವ್ರ ಅಸಮಾಧಾನ ಗೊಂಡಿರುವ ಜೆಡಿಎಸ್ ಮುಖಂಡ ಬಸವರಾಜ ಹೊರಟ್ಟಿ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ. ‘ಪಕ್ಷದಲ್ಲಿ ನಾನು ಇಷ್ಟು ಹಿರಿಯನಿದ್ದೇನೆ. ಧೀರ್ಘಕಾಲದವರೆಗೆ ವಿಧಾನ ಪರಿಷತ್ ಸದಸ್ಯನಾಗಿದ್ದೇನೆ. ನನಗೆ ಸಚಿವ ಸ್ಥಾನ ನೀಡಬೇಕಿದ್ದು ಅವರ ಕರ್ತವ್ಯ ಆಗಿತ್ತು’ ಎಂದು ತೀವ್ರ ನೋವು ವ್ಯಕ್ತಪಡಿಸಿದ್ದಾರೆ.

'ಸಚಿವರ ಪಟ್ಟಿಯಲ್ಲಿ ಯಾಕೆ ನನ್ನ ಹೆಸರಿಲ್ಲ ಅನ್ನುವುದು ಯಕ್ಷ ಪ್ರಶ್ನೆ ಯಾಗಿದೆ. ನಿಷ್ಠೆ ಇದ್ದವರಿಗೆ ಪ್ರೋತ್ಸಾಹ ಇಲ್ಲ ಅಂದರೆ ನೋವಾಗುತ್ತೆ. ನನಗೂ ನೋವಾಗಿದೆ' ಎಂದು ಹೊರಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

'ವಿಧಾನಪರಿಷತ್ ನ ಸಭಾಪತಿ ಆಗಲಾರೆ.‌ ಆ ಸ್ಥಾನದ ಬಗ್ಗೆ ಗೌರವ ಇದೆ.‌ ಆದರೆ ಅಲ್ಲಿ ಹೋಗಿ ಕೂತರೆ ಬಾಯ್ ಬಂದ್ ಮಾಡಿಕೊಳ್ಳಬೇಕು. ಹೀಗಾಗಿ ನನಗೆ ಸಭಾಪತಿ ಉಸಾಬರಿ ಬೇಡ. 7ಬಾರಿ ನನ್ನನ್ನು ಆರಿಸಿ ತಂದಿರುವ ನನ್ನ ಶಿಕ್ಷಕರ ಋಣ ತೀರಿಸಲು ನಾನು ಶಿಕ್ಷಣ ಸಚಿವ ಆಗಬೇಕು ಅಂತ ಆಸೆ ಪಟ್ಟಿದ್ದೆ. ಕುಮಾರಸ್ವಾಮಿ ಅವರಿಗೂ ಈ ಬಗ್ಗೆ ಹೇಳಿದ್ದೆ. ಆದರೆ ಏನೂ ಮಾಡಲಿಲ್ಲ' ಎಂದು ಹೊರಟ್ಟಿ ಅಸಮಾಧಾನಗೊಂಡಿದ್ದಾರೆ.

ಗೌಡರು ನನ್ನ ಹಿರಿತನ, ನಿಷ್ಠಗೆ ಸಚಿವ ಸ್ಥಾನ ನೀಡಬೇಕಿತ್ತು. ಯಾರೂ ಇಲ್ಲದ ಸಂದರ್ಭದಲ್ಲಿ ನಾನು ಪಕ್ಷದಲ್ಲಿ ಉಳಿದುಕೊಂಡೆ ಎಂದು ಹೊರಟ್ಟಿ ಹೇಳಿದ್ದಾರೆ. ಎಂಎಲ್ಸಿ ಆಗಿದ್ದೇ ತಪ್ಪಾ? ನಮ್ಮನ್ನೂ ಜನ ಮತ ಹಾಕಿಯೇ ಆರಿಸಿರೋದು. ಈ ತಾರತಮ್ಯ ತರವಲ್ಲ. ಜೆಡಿಎಸ್ ಹೀಗೆ ಎಂಎಲ್ಎ ಮತ್ತು ಎಂಎಲ್ಸಿಗಳ ನಡುವೆ ವ್ಯತ್ಯಾಸ ಮಾಡುತ್ತಿರುವುದು ಸರಿಯಲ್ಲ ಎಂದು ಗದ್ಗದಿತರಾಗಿ ಹೊರಟ್ಟಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

basavaraj horatti JDS ತಾರತಮ್ಯ ಮಂತ್ರಿ ಪದವಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ