ಕಾಂಗ್ರೆಸ್ ನಲ್ಲಿ ಅಸಮಾಧಾನ: ಫೀಲ್ಡಿಗಿಳಿಯಲು ಬಿಜೆಪಿ ಸಿದ್ಧತೆ!

Karnataka: coalition government and BJP

06-06-2018 495

ಬೆಂಗಳೂರು: ಸಚಿವ ಸ್ಥಾನದ ದೊರೆಯದ ಕಾಂಗ್ರೆಸ್ ಪಕ್ಷದ ಆಕಾಂಕ್ಷಿಗಳ ಅಸಮಾಧಾನ ಭುಗಿಲೆದ್ದ ಬೆನ್ನಲ್ಲೆ, ಬಿಜೆಪಿ ಫೀಲ್ಡಿಗಿಳಿಯಲು ಸಿದ್ಧತೆ ನಡೆಸಿದೆ. ಸಂಜೆ ತನಕ ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿರುವ ಬಿಜೆಪಿ, ಸಂಜೆ ಬಳಿಕ ಅತೃಪ್ತರ‌ನ್ನು ಸಂಪರ್ಕಿಸಲು ಬಿಜೆಪಿ ನಾಯಕರುಗಳಿಗೆ ಸೂಚನೆ ಬಂದಿದೆ ಎಂದು ಹೇಳಲಾಗುತ್ತಿದೆ. ಸತೀಶ್ ಜಾರಕಿಹೊಳಿಗೆ ಗಾಳ ಹಾಕಲು ಶ್ರೀರಾಮುಲು, ಎಂ.ಬಿ‌.ಪಾಟೀಲ್ ಗೆ ಗಾಳ ಹಾಕಲು ಉಮೇಶ್ ಕತ್ತಿ, ಬಿ.ಸಿ‌‌.ಪಾಟೀಲ್ ಗೆ ಗಾಳ ಹಾಕಲು ಉದಾಸಿ, ಶಿವಳ್ಳಿಗೆ ಗಾಳ ಹಾಕಲು ಈಶ್ವರಪ್ಪ ಅವರನ್ನು ಮಾತುಕತೆಗೆ ಸಿದ್ಧತೆ ಮಾಡಿಕೊಳ್ಳುವಂತೆ ಸೂಚನೆಗಳು ಬಂದಿವೆ ಎಂಬ ಮಾತುಗಳು ಕೇಳಿ ಬಂದಿವೆ. ಸಂಜೆ ತನಕ ಕಾದು ನೋಡಿ, ಬಳಿಕ ಬಿಜೆಪಿ ನಾಯಕರು ಗೇಮ್ ಶುರು ಮಾಡಲಿದ್ದಾರೆ ಎನ್ನಲಾಗಿದೆ.


ಸಂಬಂಧಿತ ಟ್ಯಾಗ್ಗಳು

coalition government congress-JDS ಆಕಾಂಕ್ಷಿ ಅಸಮಾಧಾನ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ