ರೈತರ ಸಾಲಮನ್ನಾ ಅವಧಿ ವಿಸ್ತರಿಸುವಂತೆ ಸಿಎಂಗೆ ಪತ್ರ

Letter to CM to extend the farmers debt duration

06-06-2018

ಮಂಡ್ಯ: ಸಾಲಮನ್ನಾ ಅವಧಿ ವಿಸ್ತರಿಸುವಂತೆ ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯರು ಸಿಎಂ ಕುಮಾರಸ್ವಾಮಿ ಅವರಿಗೆ ಪತ್ರ ಬರೆದಿದ್ದಾರೆ. ಮದ್ದೂರು ತಾಲ್ಲೂಕು ದೇಶಹಳ್ಳಿ ಗ್ರಾಮದ ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯರಿಂದ ಪತ್ರ ಬರೆಯಲಾಗಿದೆ. ತಮ್ಮ ಪತ್ರದಲ್ಲಿ ಸಮ್ಮಿಶ್ರ ಸರ್ಕಾರ ಸಾಲಮನ್ನಾ ಅವಧಿ ವಿಸ್ತರಿಸುವಂತೆ ಮನವಿ ಮಾಡಿದ್ದಾರೆ. ರಾಜ್ಯ ಸಮ್ಮಿಶ್ರ ಸರ್ಕಾರ 31ರ ಡಿಸೆಂಬರ್ 2017ರ ವರೆಗೆ ಸಾಲಮನ್ನಾ ಪ್ರಸ್ತಾವನೆ ಇಟ್ಟಿದ್ದು, ಈ ಅವಧಿಯನ್ನ 31-03-2018 ರವರೆಗೆ ವಿಸ್ತರಿಸುವಂತೆ ಮನವಿ ಮಾಡಿದ್ದಾರೆ. 2017ರ ವರೆಗೆ ಸಾಲಮನ್ನಾ ಮಾಡಿದರೆ ರಾಜ್ಯದ ಶೇ.60 ರಿಂದ 70ರಷ್ಟು ರೈತರ ಸಾಲಮನ್ನಾ ಆಗುವುದಿಲ್ಲ. ಆದ್ದರಿಂದ 2018ರ ವರೆಗೆ ಸಾಲಮನ್ನಾ ಅವಧಿ ವಿಸ್ತರಿಸುವಂತೆ ಮುಖ್ಯಮಂತ್ರಿಗೆ ಬರೆದಿರುವ ತಮ್ಮ ಪತ್ರದಲ್ಲಿ ಹೇಳಿಕೊಂಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

loan waiver Agriculture Co-opera ರೈತ ಮುಖ್ಯಮಂತ್ರಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ