ಸಂಭಾವ್ಯ ಕಾಂಗ್ರೆಸ್ ಸಚಿವರು!

Potential Congress Ministers!

06-06-2018

ಬೆಂಗಳೂರು: ಇಂದು ಮಧ್ಯಾಹ್ನ ವಿಸ್ತರಣೆಗೊಳ್ಳಲಿರುವ ರಾಜ್ಯ ಸಚಿವ ಸಂಪುಟಕ್ಕೆ ಸೇರಲಿರುವವರ ಪಟ್ಟಿಯನ್ನು ಕೊನೆಗೂ ಕಾಂಗ್ರೆಸ್ ಅಂತಿಮಗೊಳಿಸಿದೆ. ಸಂಭಾವ್ಯರ ಪಟ್ಟಿ ಈ ಕೆಳಕಂಡಂತಿದೆ. ಹೊಸ ಮುಖಗಳಿಗೆ ಅವಕಾಶ ನೀಡದಿರಲು ಕಾಂಗ್ರೆಸ್ ಹೈ ಕಮಾಂಡ್ ನಿರ್ಧರಿಸಿದ್ದು, ಅಳೆದು ತೂಗಿ 14 ಮಂದಿಯ ಪಟ್ಟಿಯನ್ನು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅಂತಿಮಗೊಳಿಸಿದ್ದಾರೆ. ರಾಜ್ಯ ನಾಯಕರ ಸಲಹೆ ಸೂಚನೆಯಂತೆ ಪಟ್ಟಿ ಸಿದ್ಧವಾಗಿದೆ.

ಬೆಂಗಳೂರು ಪಾಲಿಗೆ ಎರಡೇ ಸಚಿವ ಸ್ಥಾನ ದೊರೆಯಲಿದೆ. ಸಚಿವ ಸ್ಥಾನಕ್ಕೆ ಪ್ರದೇಶವಾರು, ಜಾತಿವಾರು ಲೆಕ್ಕಾಚಾರ ಮಾನದಂಡ ಮಾಡಲಾಗಿದೆ. ಮಾಜಿ ಸಚಿವ ರಾಮಲಿಂಗಾ ರೆಡ್ಡಿ, ಕೆಪಿಸಿಸಿ ಕಾರ್ಯಧ್ಯಕ್ಷ ದಿನೇಶ್ ಗುಂಡೂರಾವ್. ಮಾಜಿ ಸಚಿವ ರೋಷನ್ ಬೇಗ್ ಸಚಿಚ ಸ್ಥಾನ ವಂಚಿತರಾಗಿದ್ದಾರೆ. ದೋಸ್ತಿ ಸರ್ಕಾರದಲ್ಲೂ ಜಮೀರ್ ಅಹ್ಮದ್ಗೆ ಸಚಿವ ಸ್ಥಾನ ಒಲಿಯಲಿದೆ.

ಹಿರಿತನ, ಅನುಭವ, ಸಮುದಾಯದ ಆಧಾರದಲ್ಲಿ ಸಚಿವ ಸ್ಥಾನ ಪಡೆದುಕೊಂಡವರು ಹೆಚ್.ಕೆ ಪಾಟೀಲ್, ಆರ್.ವಿ ದೇಶಪಾಂಡೆ, ಶಾಮನೂರು ಶಿವಶಂಕರಪ್ಪ. ಈಡಿಗ ಸಮುದಾಯದ ಲೆಕ್ಕಾಚಾರದಲ್ಲಿ ಜಯಮಾಲಾಗೆ ಅವಕಾಶ ದೊರೆಯುವ ನಿರೀಕ್ಷೆ ಇದೆ.

ಮೈತ್ರಿ ಸರ್ಕಾರದ ಸಂಭಾವ್ಯ ಸಚಿವರುಗಳು: ರಾಜಶೇಖರ್ ಪಾಟೀಲ್, ಕೃಷ್ಣ ಭೈರೇಗೌಡ, ಶಿವಾನಂದ ಪಾಟೀಲ್, ಜಮೀರ್ ಅಹ್ಮದ್, ಯು.ಟಿ.ಖಾದರ್, ಶಿವಶಂಕರ್ ರೆಡ್ಡಿ, ಶಂಕರ್, ಕೆ.ಜೆ. ಜಾರ್ಜ್, ಡಿ.ಕೆ ಶಿವಕುಮಾರ್, ಹೆಚ್.ಕೆ ಪಾಟೀಲ್, ಆರ್.ವಿ.ದೇಶಪಾಂಡೆ, ಶಾಮನೂರು ಶಿವಶಂಕರಪ್ಪ, ಪುಟ್ಟರಂಗಶೆಟ್ಟಿ, ಜಯಮಾಲ, ಪ್ರಿಯಾಂಕ್ ಖರ್ಗೆ.


ಸಂಬಂಧಿತ ಟ್ಯಾಗ್ಗಳು

Ramalinga Reddy Dinesh Gundu Rao ಸಚಿವ ಸಂಪುಟ ಅವಕಾಶ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ