ಶಿಕ್ಷಕನ ಅಮಾನವೀಯ ಕೃತ್ಯ

A teacher badly assaulted on a student

06-06-2018

ವಿಜಯಪುರ: ಕುಡಿದ ಅಮಲಿನಲ್ಲಿ ವಿದ್ಯಾರ್ಥಿಗೆ ಸಹ ಶಿಕ್ಷಕ ಮನಬಂದಂತೆ ಥಳಿಸಿದ್ದಾರೆ. ಥಳಿತಕ್ಕೊಳಗಾದ ವಿದ್ಯಾರ್ಥಿ ಕಣ್ಣಿಗೆ ತೀವ್ರ ಪೆಟ್ಟಾಗಿದೆ. ಸಿಂದಗಿ ತಾಲ್ಲೂಕು ಜನತಾ ಕಾಲೋನಿಯಲ್ಲಿನ ಮೊರಟಗಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಿನ್ನೆ ಈ ಘಟನೆ ನಡೆದಿದೆ. 4ನೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿ ನಿಂಗಪ್ಪ ಕಕ್ಕಳಮೇಲಿ ಥಳಿತಕ್ಕೊಳಗಾದ ವಿದ್ಯಾರ್ಥಿ.

ಘಟನೆ ನಂತರ ಕಾಟಾಚಾರಕ್ಕೆ ವಿದ್ಯಾರ್ಥಿಯನ್ನು ಸರ್ಕಾರಿ ಆಸ್ಪತ್ರೆಯಲ್ಲಿ ತೋರಿಸಿ ಕೈ ತೊಳೆದುಕೊಂಡಿದ್ದಾರೆ ಶಿಕ್ಷಕ ನಗನೂರ. ಆದರೆ, ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಕರೆದ್ಯೂಯುವಂತೆ ವೈದ್ಯರು ಸಲಹೆ ಮಾಡಿದ್ದಾರೆ. ಇದಾಗಿಯೂ ಮಾನವೀಯತೆ ಮರೆತ ಶಿಕ್ಷಕ, ವಿದ್ಯಾರ್ಥಿಯನ್ನು ಮಾರ್ಗಮಧ್ಯದಲ್ಲಿಯೇ ಬಿಟ್ಟು ಹೋಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ತಮ್ಮ ಮಗನ ದುಸ್ಥಿತಿಗೆ ನಗನೂರ ಶಿಕ್ಷಕನೇ ಕಾರಣವೆಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಗನ ಕಣ್ಣು ಹೋಗಿದೆ ಎಂದು ಪೋಷಕರು ಆರೋಪಿಸಿದ್ದಾರೆ. ಶಿಕ್ಷಕನ ಅಮಾನವಿಯ ಕೃತ್ಯಕ್ಕೆ ಗ್ರಾಮಸ್ಥರೂ ಸಹ ತೀವ್ರ ಆಕ್ರೋಶಗೊಂಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Teacher Student ಅಮಾನವಿಯ ಗ್ರಾಮಸ್ಥ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ