ಅಂತಿಮ ಕ್ಷಣದಲ್ಲಿ ಜೆಡಿಸ್ ಪಟ್ಟಿ ರಾಜಭವನಕ್ಕೆ!

JDS ministers final list will reach Raj Bhavan before few hours to start programme!

06-06-2018

ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆ ಕುರಿತು ನಿನ್ನೆ ರಾತ್ರಿ 3 ಗಂಟೆಗಳ ಕಾಲ ಸಿಎಂ ಜೊತೆ ಜೆಡಿಎಸ್ ವರಿಷ್ಠ ದೇವೇಗೌಡರು ಚರ್ಚೆ ನೆಡೆಸಿದ್ದಾರೆ. ಅಂತಿಮ ಪಟ್ಟಿ ತಯಾರಿಸುವ ಕುರಿತು ಸತತ ಮೂರು ಗಂಟೆಗಳ ಕಾಲ ಚರ್ಚೆ ನಡೆಸಲಾಗಿದ್ದು, ಕೊನೆಗೂ ಜೆಡಿಎಸ್ ನ ಅಂತಿಮ ಪಟ್ಟಿ ಸಿದ್ಧವಾಗಿದೆ. ಪ್ರಮಾಣವಚನಕ್ಕೆ ಕೆಲವೇ ಗಂಟೆಗಳಿರುವಾಗ ರಾಜಭವನಕ್ಕೆ ಅಂತಿಮ ಪಟ್ಟಿ ರವಾನೆಯಾಗಲಿದೆ ಎಂದು ತಿಳಿದು ಬಂದಿದೆ. ಆದರೆ, ಕೊನೆ ಕ್ಷಣದಲ್ಲಿ ಪಟ್ಟಿಯಲ್ಲಿ ಬದಲಾವಣೆ ಆಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಸಚಿವಾಕಾಂಕ್ಷಿಗಳು ಮತ್ತು ಪ್ರಮುಖ ಮುಖಂಡರು ದೇವೇಗೌಡರ ನಿವಾಸಕ್ಕೆ ದೌಡಾಯಿಸುವ ಸಾಧ್ಯತೆಗಳು ಹೆಚ್ಚಾಗಿದ್ದು, ಈ ವೇಳೆ ಮತ್ತೊಮ್ಮೆ ಚರ್ಚೆ ನಡೆಸಿ ಅಂತಿಮ ಪಟ್ಟಿಯಲ್ಲಿ ಬದಲಾವಣೆ ಆಗುವುದನ್ನು ತಳ್ಳಿಹಾಕುವಂತಿಲ್ಲ. ಅಂತಿಮವಾಗಿ 8 ಶಾಸಕರು ಇಂದು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಬಂಡಾಯ ಶಮನಕ್ಕೆ ಮೂರು ಸ್ಥಾನಗಳನ್ನು ಬಾಕಿ ಉಳಿಸಿಕೊಳ್ಳಲು ಜೆಡಿಎಸ್ ನಿರ್ಧರಿಸಲಾಗಿ ಎಂಬ ಮಾಹಿತಿಯೂ ತಿಳಿದು ಬಂದಿದೆ.


ಸಂಬಂಧಿತ ಟ್ಯಾಗ್ಗಳು

Final list JDS ದೇವೇಗೌಡ ಬಂಡಾಯ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ