ಶಾಸಕಿ ವಿರುದ್ಧ ತಿರುಗಿ ಬಿದ್ದ ಮಹಿಳೆಯರು

womens protest against MLA roopa shashidhar

05-06-2018

ಕೋಲಾರ: ಮಾತು ತಪ್ಪಿದ ಶಾಸಕಿ ವಿರುದ್ಧ  ಕ್ಷೇತ್ರದ ಮಹಿಳೆಯರು ತಿರುಗಿ ಬಿದ್ದ ಘಟನೆ ಕೋಲಾರ ಜಿಲ್ಲೆಯ ಕೆಜಿಎಫ್ ವಿಧಾನಸಭಾ ಕ್ಷೇತ್ರದಲ್ಲಿ ನಡೆದಿದೆ. ವಿಧಾನಸಭಾ ಚುನಾವಣೆಗೂ ಮುನ್ನ ಡಿಸಿಸಿ ಬ್ಯಾಂಕ್ ನಿರ್ದೇಶಕಿಯಾಗಿದ್ದ ರೂಪ ಶಶಿಧರ್ ಕೆಜಿಎಫ್ ಕ್ಷೇತ್ರದ ಮಹಿಳೆಯರಿಗೆ ಸಾಲ ಕೊಡಿಸಿದ್ದರು. 2018ರ ಚುನಾವಣೆಗೂ ಮುನ್ನ ಸಾಲ ನೀಡಿದ ಹಣ ನಾನು ಶಾಸಕಿಯಾದ ಮೇಲೆ ಕಟ್ಟುವಂತಿಲ್ಲ ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದರು.

ನನ್ನನ್ನು ಈ ಬಾರಿ ಚುನಾವಣೆಯಲ್ಲಿ ಗೆಲ್ಲಿಸಿ ಶಾಸಕಿ ಮಾಡಿದರೆ ನೀವು ಬ್ಯಾಂಕ್ ನಿಂದ ಪಡೆದ ಸಾಲವನ್ನು ಯಾರೂ ಕಟ್ಟುವಂತೆ ಇಲ್ಲ, ಎಲ್ಲಾ ಮನ್ನಾ ಮಾಡಿಸುತ್ತೇನೆಂದು ಶಾಸಕಿ ಭರವಸೆ ನೀಡಿದ್ದರು. ಶಾಸಕಿ ಮಾತು ಕೇಳಿ ಕ್ಷೇತ್ರದ ಅನೇಕ ಮಹಿಳಾ ಸಂಘಗಳು ಲಕ್ಷಾಂತರ ರೂಪಾಯಿ ಸಾಲವನ್ನು ಡಿಸಿಸಿ ಬ್ಯಾಂಕ್ ನಿಂದ ಪಡೆದಿದ್ದರು.

ಚುನಾವಣೆಯಲ್ಲಿ ಗೆದ್ದ ನಂತರ ಇತ್ತೀಚೆಗೆ ಬ್ಯಾಂಕ್ನ ಸಿಬ್ಬಂದಿ ಸಾಲ ಪಡೆದ ಹಣವನ್ನು ಕಟ್ಟುವಂತೆ ಮಹಿಳೆಯರ ಮನೆಬಾಗಿಲಿಗೆ ಬಂದು ಹಿಂಸೆ ನೀಡುತ್ತಿದ್ದಾರೆಂದು  ಮಹಿಳೆಯರು ಆರೋಪಿಸಿದ್ದಾರೆ. ಶಾಸಕಿ ಮಾತು ಕೇಳಿ ಸಾಲ ಪಡೆದು ಮೋಸ ಹೋದ ಮಹಿಳೆಯರಿಂದ ಈಗ ಶಾಸಕಿ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ನಮ್ಮಲ್ಲಿ ಸಾಲ ಕಟ್ಟಲು ಹಣವಿಲ್ಲ, ಕೂಲಿ ಕೆಲಸ ಮಾಡಿ ಜೀವನ ನಡೆಸುತ್ತಿದ್ದೇವೆ ಎಂದು ನೊಂದ ಮಹಿಳೆಯರು ಹೇಳುತ್ತಿದ್ದಾರೆ.


ಸಂಬಂಧಿತ ಟ್ಯಾಗ್ಗಳು

roopa shashidhar KGF MLA ಶಾಸಕಿ ನಿರ್ದೇಶಕಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ