ಗಾಂಜಾ ಮಾರಾಟ: ನಾಲ್ವರ ಬಂಧನ

Sale of marijuana: four arrested

05-06-2018

ಬೆಂಗಳೂರು: ಮಲ್ಲೇಶ್ವರಂನ ವಿವಿದೆಢೆಗಳಲ್ಲಿ ಮಾದಕವಸ್ತು ಗಾಂಜಾ ಮಾರಾಟ ಮಾಡುತ್ತಿದ್ದ ನಾಲ್ವರನ್ನು ಬಂಧಿಸಿರುವ ಸಿಸಿಬಿ ಪೊಲೀಸರು 810ಗ್ರಾಂ ಗಾಂಜಾ ಸೇರಿ 75 ಸಾವಿರ ಮೌಲ್ಯದ ಮಾಲುಗಳನ್ನು ವಶಪಡಿಸಿಕೊಂಡಿದ್ದಾರೆ. ಚಂದನ್ (20), ಮನೋಜ್ ಕುಮಾರ್ (21), ಸಂತೋಷ್ (22) ಕುನಾಲ್ (20)ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರಿಂದ 810ಗ್ರಾಂ ಗಾಂಜಾ, 4 ಮೊಬೈಲ್, ನಗದ, ತೂಕದ ಯಂತ್ರ ಸೇರಿ 75 ಸಾವಿರ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿಗಳು ಬೇರೆ ಕಡೆಯಿಂದ ಗಾಂಜಾ ತಂದು ಚಿಕ್ಕಪ್ಯಾಕೆಟ್‍ಗಳಲ್ಲಿ ಕಟ್ಟಿ ಮಾರಾಟ ಮಾಡುತ್ತಿರುವುದು ವಿಚಾರಣೆಯಲ್ಲಿ ತಿಳಿದು ಬಂದಿದೆ. ಆರೋಪಿಗಳ ವಿರುದ್ಧ ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ನಗರದ ಮತ್ತೊಂದೆಡೆ ಚೆನ್ನಮ್ಮನ ಕೆರೆ ಅಚ್ಚುಕಟ್ಟುವಿನ ಮಾರುತಿ ನಗರದ ಮನೆಯೊಂದರಲ್ಲಿ ಅಂದರ್ ಬಾಹರ್ ಜೂಜಾಟವಾಡುತ್ತಿದ್ದ ನಾಲ್ವರನ್ನು ಬಂಧಿಸಿರುವ ಸಿಸಿಬಿ ಪೊಲೀಸರು 33ಸಾವಿರ ನಗದನ್ನು ವಶಪಡಿಸಿಕೊಂಡಿದ್ದಾರೆ. ವಸಂತ್ ಕುಮಾರ್, ಕೃಷ್ಣ, ವೆಂಕಟೇಶ್, ಮರಿದೇಗಯ್ಯ ಬಂಧಿತ ಆರೋಪಿಗಳು.

 


ಸಂಬಂಧಿತ ಟ್ಯಾಗ್ಗಳು

Ganja Arrest ಜೂಜಾಟ ಸಿಸಿಬಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ