ಭಾರೀ ಮಳೆ: ಮಹಿಳೆ ಬಲಿ, ಟ್ರ್ಯಾಕ್ಟರ್ ನೀರು ಪಾಲು

Heavy rain: a woman died at gadag

05-06-2018

ಗದಗ: ಕಳೆದೆರಡು ದಿನಗಳಿಂದ ರಾಜ್ಯದ ಹಲವೆಡೆ ಸುರಿಯುತ್ತಿರುವ ಭೀಕರ ಮಳೆಗೆ ಜನ ತತ್ತರಿಸಿದ್ದಾರೆ. ನಿನ್ನೆಯೂ ಸಹ ಗದಗ, ಹಾವೇರಿ, ತುಮಕೂರಲ್ಲಿ ಭಾರೀ ಮಳೆಯಾಗಿದೆ. ಗದಗ್ ನಲ್ಲಿ ಭಾರೀ ಮಳೆ ಹಿನ್ನೆಲೆ, ಮನೆಗೋಡೆ ಕುಸಿದು ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ. ರಾತ್ರಿ ಮಲಗಿದ್ದ ವೇಳೆ ಮಹಿಳೆ ಮೇಲೆ ಗೋಡೆ ಕುಸಿದಿದೆ. ತೀವ್ರವಾಗಿ ಗಾಯಗೊಂಡ ತಾಲ್ಲೂಕಿನ ತಿಮ್ಮಾಪೂರ ಗ್ರಾಮದ ಮಲ್ಲವ್ವ ಜಲಾಲ್ (55) ಮೃತ ಪಟ್ಟಿದ್ದಾರೆ. ಗ್ರಾಮಸ್ಥರೇ ಸೇರಿಕೊಂಡು ಮೃತ ಮಹಿಳೆ ಶವ ಹೊರ ತೆಗೆದಿದ್ದಾರೆ. ಗದಗ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇನ್ನು ಹಾವೇರಿಯಲ್ಲಿ, ಮಳೆ ನೀರಿನಲ್ಲಿ ಟ್ರ್ಯಾಕ್ಟರ್ ಕೊಚ್ಚಿ ಹೋಗಿದೆ. ಜಿಲ್ಲೆಯ ಶಿಗ್ಗಾವಿ ತಾಲ್ಲೂಕಿನ ಚಿಕ್ಕಮಣಕಟ್ಟಿ ಗ್ರಾಮದಲ್ಲಿ ಸುರಿದ ಭೀಕರ ಮಳೆಗೆ ಫಕೀರಪ್ಪ ನೀಲಗೂರಿ ಎಂಬುವವರ ಟ್ರ್ಯಾಕ್ಟರ್ ನೀರಿನಲ್ಲಿ‌ ಕೊಚ್ಚಿ ಹೋಗಿದೆ. ಸಮಾರು ಏಳು ಲಕ್ಷ ಮೌಲ್ಯದ ಟ್ರ್ಯಾಕ್ಟರ್ ನೀರುಪಾಲಾಗಿದೆ. ಟ್ಯಾಕ್ಟರ್ ನಲ್ಲಿದ್ದ ಫಕೀರಪ್ಪ, ಹನುಮಂತಪ್ಪ, ಗೂಳಪ್ಪ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ತುಮಕೂರಲ್ಲಿ ವರುಣನ ಅಬ್ಬರ ಮುಂದುವರಿದಿದೆ. ತುಮಕೂರು, ಕೊರಟಗೆರೆ, ಗುಬ್ಬಿ, ಮಧುಗಿರಿ ತಾಲ್ಲೂಕುಗಳಲ್ಲಿ ತಡರಾತ್ರಿ ಭಾರೀ ಮಳೆಯಾಗಿದೆ. ಮಳೆಯಿಂದಾಗಿ ಹಲವು ರಸ್ತೆಗಳು ಜಲಾವೃತವಾಗಿವೆ. ಇದರಿಂದ ದ್ವಿ-ಚಕ್ರ ವಾಹನ ಸವಾರರ ಪರದಾಟ ಹೇಳತೀರದಾಗಿತ್ತು. ವಾಹನ ಚಲಾಯಿಸಲಾಗದೆ ನೀರಿನಲ್ಲಿ ಬೈಕ್ ತಳ್ಳಿಕೊಂಡು ಹೋಗುತ್ತಿದ್ದರು.


ಸಂಬಂಧಿತ ಟ್ಯಾಗ್ಗಳು

Heavy Rain Tractor ಜಲಾವೃತ ದ್ವಿ-ಚಕ್ರ ವಾಹನ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ