ವಿಶ್ವದ ಉದ್ದಗಲಕ್ಕೂ ಪ್ಲಾಸ್ಟಿಕ್ ವ್ಯಾಪಿಸಿರುವುದು ಆತಂಕದ ವಿಷಯ05-06-2018

ಬೆಂಗಳೂರು: ಒಂದು ಪ್ಲಾಸ್ಟಿಕ್ 100 ವರ್ಷವಾದರೂ ಮಣ್ಣಿನಲ್ಲಿ ನಾಶವಾಗುವುದಿಲ್ಲ. ಪ್ರತಿಯೊಂದಕ್ಕೂ ಮಾನವ ಪ್ಲಾಸ್ಟಿಕ್ ಬಳಸುತ್ತಿದ್ದಾನೆ. ಅವನಿಗೆ ಅರಿವಿಲ್ಲದೆ ಪ್ರತಿ ದಿನ 1ಗ್ರಾಂನಷ್ಟು ಪ್ಲಾಸ್ಟಿಕ್‍ನ್ನು ಸೇವಿಸುತ್ತಿದ್ದು ಇದು ಕ್ಯಾನ್ಸರ್ ರೋಗಕ್ಕೂ ಕಾರಣವಾಗಬಹುದು ಎಂದು ಹಿರಿಯ ಭೂಗರ್ಭ ತಜ್ಞ ಡಾ||ಟಿ.ಆರ್.ಅನಂತರಾಮು ಆತಂಕ ವ್ಯಕ್ತಪಡಿಸಿದರು.

ದೇಶದಲ್ಲಿ ಪ್ಲಾಸ್ಟಿಕ್ ಬಳಸದ ಒಂದೇ ಒಂದು ಮನೆ ಸಿಗುವುದಿಲ್ಲ. ಜತೆಗೆ ವಿಶ್ವದ ಅತೀ ಎತ್ತರ ಮತ್ತು ಕೆಳಮಟ್ಟದ ಪ್ರದೇಶಗಳಿಗೂ ಪ್ಲಾಸ್ಟಿಕ್ ವ್ಯಾಪಿಸಿರುವುದು ಆತಂಕದ ವಿಷಯ ಎಂದರು.

ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ಹಾಗೂ ರಾಷ್ಟ್ರೀಯ ಸೇವಾ ಯೋಜನೆ (ಎನ್‍ಎಸ್‍ಎಫ್) ಸಂಯುಕ್ತಾಶ್ರಯದಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದ ಅವರು ಬೆಂಗಳೂರಿನ ಹೆಚ್‍ಎಸ್‍ಆರ್ ಬಡಾವಣೆ, ಹನುಮಂತನಗರ ಪ್ರದೇಶಗಳಲ್ಲಿ ಪ್ಲಾಸ್ಟಿಕ್ ಚೀಲಗಳ ಬಳಕೆಯನ್ನು ನಿಷೇಧಿಸಲಾಗಿದೆ. ಆದರೆ, ಬೇರೆ ಪ್ರದೇಶಗಳಲ್ಲಿ ಇದು ಏಕೆ ಸಾಧ್ಯವಾಗುವುದಿಲ್ಲ? ಎಂದು ಪ್ರಶ್ನಿಸಿದರು.

ಮನುಷ್ಯರ ಮನೋಭಾವ ಬದಲಾಗುವವರೆಗೆ ಪರಿಸರ ಸಂರಕ್ಷಣೆ ಸಾಧ್ಯವಾಗದು ವಿದ್ಯಾವಂತರೆನಿಸಿಕೊಂಡವರು ಮಾರ್ಗದರ್ಶಕರಾಗಿ ಪರಿಸರ ಸಂರಕ್ಷಣೆಯಂತಹ ವಿಷಯಗಳ ಬಗ್ಗೆ ಸಮಾಜದಲ್ಲಿ ಜಾಗೃತಿ ಮೂಡಿಸುವ ಮೂಲಕ ಸುಧಾರಣೆಗೆ ಮುಂದಾಗಬೇಕು. ಶಿಕ್ಷಣ ಕ್ಷೇತ್ರಗಳಲ್ಲಿ ಪ್ಲಾಸ್ಟಿಕ್‍ನಿಂದಾಗುವ ದುಷ್ಪರಿಣಾಮಗಳ ಬಗ್ಗೆ ಹೆಚ್ಚಿನ ಅರಿವು ಮೂಡಿಸಿದಲ್ಲಿ ಅದು ದೊಡ್ಡ ಪ್ರಮಾಣದ ಜಾಗೃತಿ ಕಾರ್ಯಕ್ರಮವಾಗುತ್ತದೆ ಎಂದು ಅನಂತ್ ರಾಮ್ ಹೇಳಿದರು.

ಪ್ರತಿನಿತ್ಯ 1ಮಿಲಿಯನ್ ಪ್ಲಾಸ್ಟಿಕ್ ನೀರಿನ ಬಾಟಲಿಗಳು ಮಾರಾಟವಾಗುತ್ತದೆ. ಅಂದರೆ ಎಷ್ಟರಮಟ್ಟಿಗೆ ಪ್ಲಾಸ್ಟಿಕ್ ಮೂಲಕ ಪರಿಸರ ಹಾಳಾಗುತ್ತಿದೆ ಎಂಬುದನ್ನು ಮನಗಾಣಬೇಕಾಗುತ್ತದೆ.

ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೋ.ಪದ್ಮಾಶೇಖರ್ ಅಧ್ಯಕ್ಷತೆ ವಹಿಸಿದ್ದ ಈ ಕಾರ್ಯಕ್ರಮದ ವೇದಿಕೆಯಲ್ಲಿ ಕೆಎಸ್‍ಯುನ ಹಣಕಾಸು ಅಧಿಕಾರಿ ವಿದ್ವಾನ್ ಪಾಗೋಜಿ ಹಾಗೂ ಕೆಎಸ್‍ಯುನ ಎನ್‍ಎಸ್‍ಎಸ್ ಸಂಯೋಜಕ ಡಾ.ಸಂತೋಷ್ ಹಾನಗಲ್ ವೇದಿಕೆಯಲ್ಲಿದ್ದರು. ವಿಶ್ವವಿದ್ಯಾಲಯದ ನೂರಾರು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ತಜ್ಞರು ಪ್ರದರ್ಶಿಸಿದ ಪ್ರಾತ್ಯಕ್ಷಿಕೆಗಳನ್ನು ವೀಕ್ಷಿಸಿದರು.


ಸಂಬಂಧಿತ ಟ್ಯಾಗ್ಗಳು

environment Human ಪ್ಲಾಸ್ಟಿಕ್ ಸಂಸ್ಕೃತ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ