ಬಿಜೆಪಿಯಿಂದ 'ಪುಟಗೋಸಿಗೆ' ಅಗೌರವವಾಗಿದೆ- ಮುಖ್ಯಮಂತ್ರಿ ‌ಚಂದ್ರು

Mukhyamantri Chandru counter to

05-06-2018

ತುಮಕೂರು: ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಜೆಡಿಎಸ್ ಪಕ್ಷದ ವಿರುದ್ಧ ಪುಟಗೋಸಿ ಪದ ಬಳಕೆಗೆ ಮುಖ್ಯಮಂತ್ರಿ ‌ಚಂದ್ರು ಟಾಂಗ್ ಕೊಟ್ಟಿದ್ದಾರೆ. ಆಗ್ನೇಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಮಪ್ಪ ಪರ ತುಮಕೂರಲ್ಲಿ ಚುನಾವಣಾ ಪ್ರಚಾರ ಕೈಗೊಂಡಿದ್ದರು. ಈ ವೇಳೆ ಮಾತನಾಡಿದ ಮುಖ್ಯಮಂತ್ರಿ ಚಂದ್ರು, ಸಂಸ್ಕೃತಿಯನ್ನ ಎತ್ತಿಹಿಡಿಯುವ ಪಕ್ಷದವರ ಬಾಯಿಯಲ್ಲಿ ಎಂತಹ ಮಾತು. ಪುಟಗೋಸಿ ಪದ ಕೆಟ್ಟದಲ್ಲ, ಅವರ ಬಾಯಿಂದ ಬಂದಂತಹ ರೀತಿ ಕೆಟ್ಟದ್ದು. ಪುಟಗೋಸಿಯನ್ನ ಜೆಡಿಎಸ್ ಗೆ ಹೋಲಿಕೆ ಮಾಡಿದ್ದು, ಸಣ್ಣ ಪಕ್ಷ, ಜುಜುಬಿ ಪಕ್ಷ ಎಂದು ಜೆಡಿಎಸ್ ಪಕ್ಷವನ್ನು ಜರಿದಿದ್ದು ತಪ್ಪು ಎಂದು ಅಭಿಪ್ರಾಯಪಟ್ಟರು.

ಅಂಗಾಂಗ ಮುಚ್ಚಿಕೊಳ್ಳಲು ಪುಟಗೋಸಿ ಮಹತ್ವದ ಬಗ್ಗೆ ಈಗಾಗಲೇ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ. ಪುಟಗೋಸಿ, ಉಡುದಾರ, ಲಂಗೋಟಿ, ತುಂಡುಬಟ್ಟೆಗೆ ಅದರದೇ ಆದ ಅರ್ಥವಿದೆ. ಪುಟಗೋಸಿಯನ್ನು ಇವರು(ಬಿಜೆಪಿ) ಈ ಹಿಂದೆ ಯಾಕೆ ತಬ್ಬಿಕೊಂಡಿದ್ದರು. ಪುಟಗೋಸಿಗೆ ಇವರು ಅಗೌರವ ತಂದಿದ್ದಾರೆ. ಅದು ಬಹಳ ಮರ್ಯಾದೆ ಕಾಪಾಡುವ ವಸ್ತು. ಬಿಜೆಪಿಯಿಂದ ಪುಟಗೋಸಿಗೆ ಅಗೌರವವಾಗಿದೆ ಎಂದು ಕಿಡಿಕಾರಿದ್ದಾರೆ. ಲಂಗೋಟಿ ಬಲು ಒಳ್ಳೇಯದಣ್ಣ ಅಂಗಾಂಗ ಮುಚ್ಚಲು ಲಂಗೋಟಿ ಬೇಕಣ್ಣ ಎಂದು ದಾಸರ ಪದ ಹಾಡಿ ವ್ಯಂಗ್ಯವಾಡಿದ್ದಾರೆ ಮುಖ್ಯಮಂತ್ರಿ ಚಂದ್ರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ