ಮುನಿರತ್ನ ಅನರ್ಹತೆಗೆ ಬಿಜೆಪಿ ಮನವಿ!

BJP demanding MLA Munirathna

05-06-2018

ಬೆಂಗಳೂರು: ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಪರಾಜಿತ ಅಭ್ಯರ್ಥಿ ತುಳಸಿ ಮುನಿರಾಜು, ಕಾರ್ಪೊರೇಟರ್ ಮಮತಾ ವಾಸುದೇವ್, ಶಿವಣ್ಣ, ರಾಕೇಶ್ ಅವರು ಪತ್ರಿಕಾಗೋಷ್ಠಿ ನಡೆಸಿದ್ದು, ಕಾಂಗ್ರೆಸ್ ಶಾಸಕ ಮುನಿರತ್ನ ಅವರ ಶಾಸಕ ಸ್ಥಾನವನ್ನು ಅನರ್ಹತೆ ಗೊಳಿಸುವಂತೆ ವಿಧಾನಸಭಾಧ್ಯಕ್ಷರಿಗೆ ಮನವಿ ಮಾಡುವುದಾಗಿ ತಿಳಿಸಿದ್ದಾರೆ.

ನಕಲಿ ಛಾಪಾ ಕಾಗದ ಹಗರಣದ ಸುದ್ದಿ ಮಾದರಿಯಲ್ಲಿ, ನಕಲಿ ಓಟರ್ ಐಡಿ ಕಾರ್ಡ್ ಮಾಡಲಾಗಿತ್ತು. ಅಲ್ಲದೆ ಸಾವಿರಾರು ಓಟರ್ ಐಡಿ ಸಂಗ್ರಹ ಮಾಡಲಾಗಿತ್ತು, ಈ ಅಕ್ರಮ ತಲ್ಲಣ ಮೂಡಿಸಿತ್ತು. ಇದೆಲ್ಲದಕ್ಕೆ ಕ್ಷೇತ್ರದ ಶಾಸಕ ಮುನಿರತ್ನ ಅವರೇ ಕಾರಣ ಎಂದು ಆರೋಪಿಸಿದರು. ಇದರ ಬಗ್ಗೆ ಯಾವುದೇ ತನಿಖೆ ನಡೆಸದೆ ಚುನಾವಣೆ ನಡೆಸಲಾಯಿತು. 9ಸಾವಿರ ಅಕ್ರಮ ಓಟರ್ ಐಡಿ ತೆಗೆದುಕೊಂಡು ಓಡಿಹೋಗಿದ್ದಾರೆ. ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ 420ಕೇಸ್ ದಾಖಲಾಗಿದ್ದರೂ ಆರೋಪಿಗಳನ್ನು ಬಂಧಿಸಿಲ್ಲ.

ಜಾಲಹಳ್ಳಿ ಇನ್ಸ್ಪೆಕ್ಟರ್ ನಿರಂಜನ್ ಕುಮಾರ್ ತಲೆಮರೆಸಿಕೊಂಡಿರೋದಾಗಿ ಹೇಳಿಕೆ ನೀಡಿದ್ದಾರೆ. ಎಲ್ಲಾ ಪತ್ರಿಕಾಗೋಷ್ಠಿಯಲ್ಲಿ ಮುನಿರತ್ನ ತಮ್ಮ ಪಕ್ಷದ ನಾಯಕರು, ಮುಖ್ಯಮಂತ್ರಿ ಜೊತೆಯಲ್ಲಿ ಕಾಣಿಸಿಕೊಂಡರು ಅವರ ವಿರುದ್ಧ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.

ಚುನಾವಣಾ ಅಕ್ರಮ ನಡೆದ ಬಳಿಕ, ನನ್ನನ್ನೂ ಸೇರಿದಂತೆ ಬಿಜೆಪಿ ಮುಖಂಡರ ಮೇಲೆ ಜಾತಿ ನಿಂದನೆ ದೂರು ದಾಖಲಿಸಲಾಗಿದೆ. ಒಂದು ರೀತಿಯ ಭಯದ ವಾತಾವರಣ ನಿರ್ಮಾಣ ಮಾಡಿದ್ದಾರೆ. ಜನಾದೇಶ ನಮ್ಮ ಪರವಾಗಿದೆ. ಅತಿ ಹೆಚ್ಚು ಜನ ಅವರ ವಿರುದ್ಧವಾಗಿ ತನಗೆ ಮತ್ತು ಜೆಡಿಎಸ್ ಅಭ್ಯರ್ಥಿಗೆ ಮತ ಹಾಕಿದ್ದಾರೆ. ಅವರ ಬೆಂಬಲಿಗರು ಎರಡು ಬಾರಿ ಮತದಾನ ಮಾಡಿರೋದಾಗಿ ಹೇಳಿಕೊಂಡಿದ್ದಾರೆ ಎಂದು ತುಳಸಿ ಮುನಿರಾಜು ಹೇಳಿದರು.

ಈ ಪ್ರಕರಣವನ್ನು ಸುಪ್ರೀಂ ಕೋರ್ಟ್ ವರೆಗೂ ತೆಗೆದುಕೊಂಡು ಹೋಗುತ್ತೇನೆ. ಕ್ಷೇತ್ರದ ಶಾಸಕರ ಸ್ಥಾನ ಅನರ್ಹಗೊಳಿಸುವಂತೆ ಸ್ಪೀಕರ್ ಅವರಲ್ಲಿ ಮನವಿ ಮಾಡುತ್ತೇನೆ ಎಂದು, ತುಳಸಿ ಮುನಿರಾಜು ಸ್ಪಷ್ಟಪಡಿಸಿದರು.


ಸಂಬಂಧಿತ ಟ್ಯಾಗ್ಗಳು

Munirathna Voter ID ಅನರ್ಹ ಸ್ಪೀಕರ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ