ಪರಿಸರ ರಕ್ಷಣೆ ಜಾಗೃತಿಗಾಗಿ ಸೈಕಲ್ ಜಾಥಾ

world environment day: Cycle jatha at gadag

05-06-2018

ಗದಗ: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಗದಗ ಜಿಲ್ಲಾಧಿಕಾರಿ ಮನೋಜ್ ಜೈನ್ ಸೈಕಲ್ ಜಾಥಾಗೆ ಚಾಲನೆ ನೀಡಿದರು. ಗದಗ ನಗರದ ನಗರಸಭೆ ಕಾಲೇಜು ಮೈದಾನದಿಂದ ಆರಂಭವಾದ ಸೈಕಲ್ ಜಾಥಾ ಬಿಂಕದಕಟ್ಟೆ ಪ್ರಾಣಿ ಸಂಗ್ರಹಾಲಯದವರೆಗಿನ ಸುಮಾರು 5ಕಿಮಿ ವರೆಗೆ ಸೈಕಲ್ ಮೂಲಕ ಸಾಗಿ ಬಂದರು. ಈ ವೇಳೆ ಪರಿಸರ ಸಂರಕ್ಷಣೆಗಾಗಿ ಪ್ರತಿಜ್ಞಾ ಹಸ್ತಾಕ್ಷರ ಸಂಗ್ರಹ ಮಾಡಲಾಯಿತು. ಪ್ಲಾಸ್ಟಿಕ್ ನಿಷೇಧದ ಕುರಿತು ಜಾಗೃತಿ ಮೂಡಿಸಿದ್ದಾರೆ. ಕಾರ್ಯಕ್ರಮದಲ್ಲಿ ಡಿಸಿ ಮನೋಜ್ ಜೈನ್, ಸಿಇಒ ಮಂಜುನಾಥ್ ಚೌವ್ಹಾಣ್, ಡಿಎಫ್ಓ ಸೋನಾಲ್ ವೃಷಣಿ, ಡಿಡಿಪಿಐ ಜಿ.ರುದ್ರಪ್ಪ ಸೇರಿ ಹಲವು ಅಧಿಕಾರಿಗಳು ಭಾಗಿಯಾಗಿದ್ದರು.


ಸಂಬಂಧಿತ ಟ್ಯಾಗ್ಗಳು

environment Cycle jatha ಸಂರಕ್ಷಣೆ ಹಸ್ತಾಕ್ಷರ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ