‘ಹಿರಿಯರನ್ನೂ ಸಚಿವ‌ ಸ್ಥಾನಕ್ಕೆ ಪರಿಗಣಿಸಿ’- ಹೆಚ್.ಎಂ ರೇವಣ್ಣ05-06-2018

ನವದೆಹಲಿ: ಸಚಿವ ಸಂಪುಟ ವಿಸ್ತರಣೆ ಹಿನ್ನೆಲೆ ನವದೆಹಲಿಯಲ್ಲಿ ಮಾತನಾಡಿದ ಮಾಜಿ ಸಚಿವ ಹೆಚ್.ಎಂ ರೇವಣ್ಣ, 'ತಮ್ಮ ಸಮಾಜದಿಂದ (ಕುರುಬ) ಮೂರ್ನಾಲ್ಕು ಶಾಸಕರಿದ್ದಾರೆ. ಆದರೆ, ಅವರಲ್ಲಿ ನಾನೇ ಹಿರಿಯನಾಗಿದ್ದೇನೆ. ಆದ್ದರಿಂದ ನನ್ನನ್ನು ಸಚಿವ ಸ್ಥಾನಕ್ಕೆ ಪರಿಗಣಿಸಬೇಕು. ನಾನೊಬ್ಬ ಪಕ್ಷದ ನಿಷ್ಠಾವಂತ ಕಾರ್ಯಕರ್ತ‌. ಹಿರಿಯರನ್ನೂ ಸಚಿವ‌ ಸ್ಥಾನಕ್ಕೆ ಪರಿಗಣಿಸಿ' ಎಂದು ಸಚಿವ ಸ್ಥಾನದ ಇಂಗಿತ ವ್ಯಕ್ತಪಡಿಸಿದ್ದಾರೆ.

ಜೆಡಿಎಸ್ ನಲ್ಲಿ ಘಟಾನುಘಟಿಗಳು ಸಚಿವರಾಗುತ್ತಾರೆ. ಇಂತಹ ಸಂದರ್ಭದಲ್ಲಿ ಕಾಂಗ್ರೆಸ್ ನಿಂದ ಕಿರಿಯರಿಗೆ ಸಚಿವ‌ ಸ್ಥಾನ ನೀಡಿದರೆ ಸರಿಯಾಗಲಾರದು. ಕಾಂಗ್ರೆಸ್ ಕೂಡ ಕೆಲ ಹಿರಿಯರಿಗೆ ಮಣೆ ಹಾಕಬೇಕು. ಈಗಾಗಲೇ ಪ್ರಬಲ ಖಾತೆಗಳು ಜೆಡಿಎಸ್ಗೆ ಹೊಗಿವೆ ಎಂದರು.


ಸಂಬಂಧಿತ ಟ್ಯಾಗ್ಗಳು

HM Revanna Cabinet ಕಾರ್ಯಕರ್ತ‌ ನವದೆಹಲಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ