‘ನಾನು ಯಾವತ್ತೂ ಅಧಿಕಾರದ ಹಿಂದೆ ಹೋಗಿಲ್ಲ’- ರಾಮಲಿಂಗಾ ರೆಡ್ಡಿ04-06-2018

ಬೆಂಗಳೂರು: ‘ನಾನು ಯಾವತ್ತೂ ಅಧಿಕಾರದ ಹಿಂದೆ ಹೋಗಿಲ್ಲ. ಇದುವರೆಗೂ ಅಧಿಕಾರವೇ ನನ್ನ ಹುಡುಕಿಕೊಂಡು ಬಂದಿದೆ. ಹಿರಿಯ ಮತ್ತು ಅನುಭವದ ಕಾರಣ ಅಧಿಕಾರ ಸಿಕ್ಕಿದೆ' ಎಂದು ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ. ನಮ್ಮ ಅದೃಷ್ಟ ಎಲ್ಲಿಯವರೆಗೂ ಚೆನ್ನಾಗಿರುತ್ತೋ ಅಲ್ಲಿಯವರೆಗೆ ಮುಂದುವರೆದುಕೊಂಡು ಹೋಗುತ್ತೆ ಎಂದರು. ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ಹಿರಿಯರ ಬದಲು ಕಿರಿಯರಿಗೆ ಸಚಿವ ಸ್ಥಾನ ನೀಡುವ ವಿಚಾರದ ಕುರಿತು ಹೇಳಿಕೆ ನೀಡಿ ‘ಸಚಿವ ಸಂಪುಟದಲ್ಲಿ ಹಿರಿಯರಿಬೇಕೋ ಕಿರಿಯರಿಬೇಕೋ ಅನ್ನೋದನ್ನ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ತಾವು ಯಾಕೆ ತಲೆ ಕೆಡೆಸಿಕೊಳ್ಳಬೇಕು ಎಂದರು.

ಎಷ್ಟು ವರ್ಷ ಮುಖ್ಯಮಂತ್ರಿಯಾಗಿ ಇರ್ತಿನೋ! ಎಂಬ ಸಿಎಂ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದು, ಕುಮಾರಸ್ವಾಮಿ ಸಾಂದರ್ಭಿಕವಾಗಿ ಆ ರೀತಿಯಾಗಿ ಹೇಳಿರಬಹುದು. ಕಾಂಗ್ರೆಸ್ ಪಕ್ಷದಿಂದ ಕುಮಾರಸ್ವಾಮಿ ಅವರಿಗೆ ಐದು ವರ್ಷ ಸಂಪೂರ್ಣ ಬೆಂಬಲ ಇರುತ್ತದೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ಸ್ಪಷ್ಟಪಡಿಸಿದ್ದಾರೆ. ಕಾಂಗ್ರೆಸ್ ಹಾಗೂ ‌ಜೆಡಿಎಸ್ ಮೈತ್ರಿ ಸರ್ಕಾರ ಐದು ವರ್ಷ ಪೂರ್ಣಗೊಳಿಸಲಿದೆ. ಸರ್ಕಾರ ಸುಭದ್ರವಾಗಿರಬೇಕು ಎಂಬುದು ನಮ್ಮ ಬಯಕೆಯಾಗಿದೆ ಎಂದರು.


ಸಂಬಂಧಿತ ಟ್ಯಾಗ್ಗಳು

Ramalinga Reddy KPCC ಮುಖ್ಯಮಂತ್ರಿ ಅನುಭವ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ