'ಮಂತ್ರಿಯಾಗಲು ಗಟ್ಸ್ ಬೇಕು, ‌ತಿಳುವಳಿಕೆ ಇರಬೇಕು’- ಹೊರಟ್ಟಿ

legislative council member Basavaraj Horatti press meet at chitradurga

04-06-2018

ಚಿತ್ರದುರ್ಗ: ‘ಅಗತ್ಯ ಬಿದ್ದರೆ ಸಚಿವ ಸ್ಥಾನ ತ್ಯಾಗ ಮಾಡಲೂ ನಾನು ತಯಾರಿದ್ದೇನೆ’ ಎಂದು ಚಿತ್ರದುರ್ಗದಲ್ಲಿ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್ಲರೂ ಸಚಿವರಾಗಬೇಕು ಎಂದು ಪೈಪೋಟಿ ಮಾಡಿದರೆ ಜನ ನಗುತ್ತಾರೆ. ಮಂತ್ರಿಯಾಗಲು ಗಟ್ಸ್ ಇರಬೇಕು, ‌ತಿಳುವಳಿಕೆ ಇರಬೇಕು, ಈ ವಿಚಾರದಲ್ಲಿ ಮುಖ್ಯಮಂತ್ರಿಗೆ ತೀರ್ಮಾನ ತೆಗೆದುಕೊಳ್ಳಲು ಸ್ವತಂತ್ರ ಕೊಡಬೇಕು ಎಂದರು.

ಜಗಳ ಮಾಡಿ ಸರ್ಕಾರ ಕಳೆದುಕೊಂಡರೆ ಮುಂದೆ ಕಾಂಗ್ರೆಸ್-ಜೆಡಿಎಸ್ ಎರಡೂ ಪಕ್ಷಗಳಿಗೆ ಜನ ಬೆಂಬಲ ಕೊಡಲ್ಲ, ಈ ಪರಿಸ್ಥಿತಿಯನ್ನು ಸರಿದೂಗಿಸಿಕೊಂಡು ಹೋಗುವ ವ್ಯವಧಾನ‌ ಕುಮಾರಸ್ವಾಮಿ ಅವರಿಗಿದೆ, ಕುಮಾರಸ್ವಾಮಿ ಅವರಿಗಿರುವ ತಾಳ್ಮೆ ಬೇರೆಯವರಿಗಿಲ್ಲ ಎಂದು ಹೇಳಿದರು.

ಐದು ವರ್ಷ ಸರ್ಕಾರ ನಡೆಯಲ್ಲ ಎನ್ನುವ ಯಡಿಯೂರಪ್ಪ ಭವಿಷ್ಯ ಸುಳ್ಳಾಗುತ್ತೆ. ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟ ಇನ್ನುಮುಂದೆ ನ್ಯಾಯಾಲಯದ ಮೂಲಕ ನಡೆಯುತ್ತದೆ, ಮಾತೇ ಮಹಾದೇವಿ ಬೆದರಿಕೆಗೆ ತಲೆ ಕೆಡಿಸಿಕೊಳ್ಳಲ್ಲ ಎಂದರು.

ವಿಧಾನಸಭೆಯಲ್ಲಿ ತಿರಸ್ಕಾರ ಮಾಡಿದ ಅಭ್ಯರ್ಥಿಯನ್ನು ಬಿಜೆಪಿ ಆಗ್ನೇಯ ಶಿಕ್ಷಕರ ಕ್ಷೇತ್ರಕ್ಕೆ ಕಣಕ್ಕಿಳಿಸಿದೆ ಎಂದು ವ್ಯಂಗ್ಯವಾಡಿದ ಅವರು ಜೆಡಿಎಸ್ ಅಭ್ಯರ್ಥಿ ರಮೇಶ್ ಬಾಬು ಪರವಾಗಿ ಮತ ನೀಡುವಂತೆ ಮನವಿ ಮಾಡಿದರು.


ಸಂಬಂಧಿತ ಟ್ಯಾಗ್ಗಳು

Basavaraj horatti B.S.Yeddyurappa ವಿಧಾನಸಭೆ ತಿರಸ್ಕಾರ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ