ರಾಜ್ಯಪಾಲರ ವಿರುದ್ಧ ಆರ್‌ಟಿಐ ಕಾರ್ಯಕರ್ತ ರಾಷ್ಟ್ರಪತಿಗೆ ದೂರು!

An RTI activist complaint against governor to president!

04-06-2018

ಬೆಂಗಳೂರು: ರಾಜ್ಯಪಾಲ ವಜುಭಾಯಿ ವಾಲಾ ವಿರುದ್ಧ ರಾಷ್ಟ್ರಪತಿಗೆ ಆರ್‌ಟಿಐ ಕಾರ್ಯಕರ್ತ ನರಸಿಂಹ ಮೂರ್ತಿ ಎಂಬುವರು ದೂರು ನೀಡಿದ್ದಾರೆ. ತಾವು ಸಲ್ಲಿಸಿದ್ದ ಆರ್.ಟಿ.ಐ ಅರ್ಜಿಗೆ ಯಾವುದೇ ಮಾಹಿತಿ ನೀಡದ ಹಿನ್ನೆಲೆ, ರಾಜ್ಯಪಾಲರ ಅಸಹಕಾರದ ವಿರುದ್ಧ ದೂರು ನೀಡಿ, ಮಾಹಿತಿ ಹಕ್ಕಿನ ಅಡಿಯಲ್ಲಿ ಮಾಹಿತಿ ಕೊಡಿಸುವಂತೆ ಮನವಿ ಮಾಡಿದ್ದಾರೆ.

ರಾಜ್ಯಪಾಲರ ಪ್ರವಾಸದ ಖರ್ಚು-ವೆಚ್ಚ ಮತ್ತು ರಾಜಭವನದ ಸಿಬ್ಬಂದಿಗಳ ಕುರಿತು ಮಾಹಿತಿ ಕೇಳಿದ್ದರು ಆರ್ಟಿಐ ಕಾರ್ಯಕರ್ತ ನರಸಿಂಹ ಮೂರ್ತಿ. ಆದರೆ, ಮಾಹಿತಿ ನೀಡಲು ರಾಜಭವನ ನಿರಾಕರಿಸಿದ್ದು, ಅಂತಿಮವಾಗಿ ರಾಜಭವನ ಆರ್ಟಿಐ ವ್ಯಾಪ್ತಿಯಲ್ಲಿ ಬರುವುದಿಲ್ಲವೆಂದು ಸ್ಪಷ್ಟನೆ ನೀಡಿದೆ. ಆದರೆ, ಇಷ್ಟಕ್ಕೆ ಸುಮ್ಮನಾಗದ ಇವರು, ಮಾಹಿತಿ ನೀಡದಿರುವ ಬಗ್ಗೆ ದೂರು ನೀಡಿದ್ದಾರೆ. ವಿವಿಧ ರಾಜ್ಯಗಳ 15 ರಾಜಭವನದಿಂದ ಮಾಹಿತಿ ನೀಡಲಾಗಿದೆ, ಆದರೆ ಕರ್ನಾಟಕದಲ್ಲಿ ಮಾಹಿತಿ ನೀಡದಿರುವ ಬಗ್ಗೆ ಉಲ್ಲೇಖಿಸಿ ರಾಷ್ಟ್ರಪತಿಗೆ ದೂರು ಸಲ್ಲಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

RTI Presdient ವಜುಭಾಯಿ ಪ್ರವಾಸ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ