ವ್ಯಕ್ತಿ ತಲೆ ಕತ್ತರಿಸಿ ಪರಾರಿಯಾಗಿದ್ದ ರೌಡಿ ಬಂಧನ

Rowdy pawan alias pawani arrested

04-06-2018

ಬೆಂಗಳೂರು: ಸ್ನೇಹಿತನಂತೆ ನಂಬಿಸಿ ಯುವಕನೊಬ್ಬನನ್ನು ಕರೆದೊಯ್ದು ಬಟ್ಟೆ ಬಿಚ್ಚಿಸಿ ತಲೆ ಕತ್ತರಿಸಿ ಕೊಲೆ ಮಾಡಿ ಪರಾರಿಯಾಗಿದ್ದ ಕುಖ್ಯಾತ ರೌಡಿ ಪವನ್ ಅಲಿಯಾಸ್ ಪವನಿಯನ್ನು ದೊಡ್ಡಬಳ್ಳಾಪುರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕಳೆದ ಜೂನ್ 1ರಂದು ರಾತ್ರಿ ದೊಡ್ಡಬಳ್ಳಾಪುರದ ಕರೇನಹಳ್ಳಿಯ ಉಪೇಂದ್ರ ಅಲಿಯಾಸ್ ಉಪ್ಪಿ(25) ಎಂಬಾತನ ತಲೆ ಕತ್ತರಿಸಿ ಕೊಲೆ ಮಾಡಿ ಪರಾರಿಯಾಗಿದ್ದ ರಾಜಘಟ್ಟ ಮೂಲದ ದೊಡ್ಡಬಳ್ಳಾಪುರದ ರೋಸಿಪುರದ ರೌಡಿ ಪವನಿ (21)ನನ್ನು ಕಾರ್ಯಾಚರಣೆ ನಡೆಸಿ ಬಂಧಿಸಲಾಗಿದೆ ಎಂದು ಗ್ರಾಮಾಂತರ ಎಸ್ಪಿ ಭೀಮಶಂಕರ ಗುಳೇದ್ ತಿಳಿಸಿದ್ದಾರೆ.

ದೊಡ್ಡಬಳ್ಳಾಪುರದ ಪೊಲೀಸ್ ಠಾಣೆಯ ರೌಡಿ ಪಟ್ಟಿಯಲ್ಲಿದ್ದ ಪವನ್ ಕಳೆದ ಮೇ 29ರಂದು ದೊಡ್ಡಬಳ್ಳಾಪುರದ ಅಶೋಕ್ ಹಾಗೂ ಆತನ ಸಹಚರರು ತನ್ನ ಸ್ನೇಹಿತನ ಬೈಕ್ ಕಸಿದುಕೊಂಡು ಹೋಗಿದ ವಿಚಾರದಲ್ಲಿ ಜಗಳವಾಗಿತ್ತು.

ಅಶೋಕ್‍ನ ಸಹಚರರ ಉಪೇಂದ್ರ ತನ್ನ ಹಾಗೂ ಸಹಚರರ ಬಗ್ಗೆ ಮಾಹಿತಿಯನ್ನು ಅಶೋಕನಿಗೆ ಕೊಟ್ಟು ಹೊಡೆಸುತ್ತಾನೆ ಎಂದು ತಿಳಿದು ಮೇ 30ರಂದು ಸಂಜೆ ಉಪೇಂದ್ರನನ್ನು ಸ್ನೇಹಿತರೊಂದಿಗೆ ನಂಬಿಸಿ, ನಾಗರಕೆರೆಯ ನಡುಗಡ್ಡೆಯ ಮೇಲ್ಭಾಗಕ್ಕೆ ಕರೆದುಕೊಂಡು ಹೋಗಿ ಬಟ್ಟೆಯನ್ನು ಬಿಚ್ಚಿಸಿ ನಗ್ನ ಗೊಳಿಸಿ, ತಲೆಯನ್ನು ಕತ್ತರಿಸಿದ್ದ. ನಂತರ ಪೊಲೀಸರಿಗೆ ಶರಣಾಗಲು ತಲೆಯನ್ನು ಚೀಲದಲ್ಲಿ ಇಟ್ಟುಕೊಂಡು ದಾರಿಯಲ್ಲಿ ಬರುವಾಗ ಭಯವಾಗಿ ತಲೆಯನ್ನು ಚಿಕ್ಕಪೇಟೆಯ ಬಳಿಯ ಅಂಚಿನಲ್ಲಿ ಹಾಕಿ ಹೋಗಿದ್ದ.

ಅದೇ ದಿನ ರಾತ್ರಿ ಅಶೋಕ್ ಮತ್ತು ಸಹಚರರು ತನಗೆ ಹೊಡೆದು ಕೊಲೆ ಮಾಡಿದ ಪ್ರಯತ್ನ ನಡೆಸಿದ್ದಾನೆ ಎಂದು ಪವನ್ ಪೊಲೀಸರಿಗೆ ದೂರು ನೀಡಿದ್ದ. ಈ ಸಂಬಂಧ ಪ್ರಕರಣ ದಾಖಲಿಸಿ ತನಿಖೆ ಕೈ ಗೊಂಡ ಪೊಲೀಸರಿಗೆ ಕೊಲೆ ಯತ್ನ ನಡೆಸಿರುವುದರ ಮಾಹಿತಿ ಇರಲಿಲ್ಲ. ಈ ಕೊಲೆ ಯತ್ನದ ಸಂಬಂಧ ಅಶೋಕ್ ಸೇರಿದಂತೆ ಐವರನ್ನು ಬಂಧಿಸಲಾಗಿದೆ.

ತಲೆಯಿಲ್ಲದ ದೇಹದ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಕೃತ್ಯ ನಡೆಸಿರುವುದನ್ನು ಒಪ್ಪಿಕೊಂಡಿದ್ದು, ಕೊಲೆಯ ಸಾಕ್ಷ್ಯಾಧಾರಗಳನ್ನು ಕೊಲೆ ಮುಚ್ಚಿಹಾಕಲು ಈ ರೀತಿ ಕೃತ್ಯವೆಸಗಿದ್ದಾನೆ ಎಂದು ಎಸ್ಪಿ ತಿಳಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Rowdy Murder ಸಾಕ್ಷ್ಯಾಧಾರ ಕೃತ್ಯ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ