ನಟ ದುನಿಯಾ ವಿಜಿ ಪತ್ತೆಗೆ ವಿಶೇಷ ಪೊಲೀಸ್ ತಂಡ ರಚನೆ

police searching for actor duniya vijay

04-06-2018

ಬೆಂಗಳೂರು: ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪ್ರಕರಣ ದಾಖಲಾದ ನಂತರ ನಾಪತ್ತೆಯಾಗಿರುವ ಚಿತ್ರ ನಟ ದುನಿಯಾ ವಿಜಯ್ ಅವರ ಪತ್ತೆಗೆ ಪೊಲೀಸರು ವಿಶೇಷ ತಂಡವನ್ನು ರಚಿಸಿದ್ದಾರೆ. ಕರ್ತವ್ಯಕ್ಕೆ ಅಡ್ಡಿ ಹಾಗೂ ಆರೋಪಿ ಪರಾರಿಯಾಗಲು ಸಹಕರಿಸಿದ್ದಕ್ಕೆ ನಟ ದುನಿಯಾ ವಿಜಯ್ ವಿರುದ್ಧ ಎಫ್‍ಐಆರ್ ದಾಖಲಾಗಿತ್ತು. ಎಫ್‍ಐಆರ್ ದಾಖಲಾಗುತ್ತಿದ್ದಂತೆ ವಿಜಯ್ ಪರಾರಿಯಾಗಿದ್ದರು.

ಮೊದಲು ಮಾಸ್ತಿಗುಡಿ ದುರಂತಕ್ಕೆ ಸಂಬಂಧಿಸಿದಂತೆ ನಿರ್ಮಾಪಕ ಸುಂದರ ಪಿ.ಗೌಡ ಬಂಧನಕ್ಕೆ ಕೋರ್ಟ್ ಆದೇಶಿಸಿತ್ತು. ಪೊಲೀಸರು ನಿರ್ಮಾಪಕರ ಬಂಧನಕ್ಕೆ ತೆರಳಿದ್ದಾಗ ಸ್ಥಳದಲ್ಲಿದ್ದ ದುನಿಯಾ ಸುಂದರ ಪರಾರಿಯಾಗಲು ಸಹಾಯ ಮಾಡಿದ್ದರು. ಈ ಹಿನ್ನೆಲೆಯಲ್ಲಿ ದುನಿಯಾ ವಿಜಯ್ ನಾಪತ್ತೆಯಾಗಿದ್ದಾರೆ.

ಪರಾರಿಯಾಗಿದ್ದ ನಿರ್ಮಾಪಕ ಸುಂದರ ಪಿ. ಗೌಡ ಅವರಿಗೆ ರಾಮನಗರ ಜೆಎಂಎಫ್‍ಸಿ ಕೋರ್ಟ್ ಜಾಮೀನು ನೀಡಿದೆ. ಇತ್ತ ಇದುವರೆಗೂ ಜಾಮೀನು ಸಿಗದ ಹಿನ್ನೆಲೆಯಲ್ಲಿ ದುನಿಯಾ ವಿಜಯ್ ನಾಪತ್ತೆಯಾಗಿದ್ದಾರೆ. ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸರು ವಿಶೇಷ ತಂಡ ರಚನೆ ಮಾಡಿ ದುನಿಯಾ ವಿಜಯ್ ಅವರಿಗಾಗಿ ಹುಡುಕಾಟ ಆರಂಭಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

duniya viji Actor ಜಾಮೀನು ಹುಡುಕಾಟ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ