ಜೆಸಿಬಿಯನ್ನೇ ಕದ್ದ ಐನಾತಿ ಕಳ್ಳ ಪೊಲೀಸ್ ಬಲೆಗೆ!

JCB Thief!

04-06-2018

ಬೆಂಗಳೂರು: ಹಣದಾಸೆಗಾಗಿ ಕೆಲಸ ಮಾಡುತ್ತಿದ್ದ ಮಾಲೀಕನ ಜೆಸಿಬಿಯನ್ನೇ ಕಳವು ಮಾಡಿ ಬಾಡಿಗೆಗೆ ಬಿಟ್ಟಿದ್ದ ಐನಾತಿ ಚಾಲಕನೊಬ್ಬನನ್ನು ಯಲಹಂಕ ಉಪನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅರಕಲಗೂಡು ಮೂಲದ ಜಯಣ್ಣ (30)ಬಂಧಿತ ಆರೋಪಿಯಾಗಿದ್ದು, ಈತನಿಂದ 25ಲಕ್ಷ ಮೌಲ್ಯದ ಜೆಸಿಬಿಯನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ.

ಅಟ್ಟೂರಿನ ಲೋಕೇಶ್ ಎಂಬುವರ ಬಳಿ ಜೆಸಿಬಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ಆರೋಪಿಯು ಜೆಸಿಬಿಯಿಂದ ಕೆಲಸ ಮಾಡಿಸಿಕೊಳ್ಳಲು ಗಂಟೆಗೆ ನೀಡುತ್ತಿದ್ದ ಬಾಡಿಗೆ ಹಣವನ್ನು ನೋಡಿ ಹೆಚ್ಚಿನ ಹಣದಾಸೆಗಾಗಿ ಜೆಸಿಬಿ ಕದಿಯಲು ಸಂಚು ರೂಪಿಸಿದ್ದಾನೆ.

ಅದರಂತೆ ಕಳೆದ ಜೂ.1ರ ರಾತ್ರಿ ಕೆಲಸಕ್ಕೆ ಜೆಸಿಬಿ ತೆಗೆದುಕೊಂಡು ಹೋಗಿದ್ದ ಜಯಣ್ಣ ಕೆಲಸ ಮುಗಿಸಿಕೊಂಡು ಅಟ್ಟೂರಿಗೆ ಬಾರದೇ ಹಿಂದೂಪುರಕ್ಕೆ ಚಲಾಯಿಸಿಕೊಂಡು ಹೋಗಿ ಬಾಡಿಗೆಗೆ ಬಿಟ್ಟಿದ್ದನು. ಈ ಸಂಬಂಧ ದೂರು ದಾಖಲಿಸಿಕೊಂಡ ಯಲಹಂಕ ಉಪನಗರ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿ 25ಲಕ್ಷ ಮೌಲ್ಯದ ಜೆಸಿಬಿಯನ್ನು ವಶಪಡಿಸಿಕೊಂಡಿದ್ದಾರೆ ಎಂದು ಡಿಸಿಪಿ ಕಲಾ ಕೃಷ್ಣಸ್ವಾಮಿ ತಿಳಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

JCB Thief ಹಿಂದೂಪುರ ಡಿಸಿಪಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ