ಬಿರುಗಾಳಿ ಸಹಿತ ಮಳೆಗೆ ಬಳ್ಳಾರಿ ತತ್ತರ

Heavy Rain at bellary

04-06-2018

ಬಳ್ಳಾರಿ: ನಿನ್ನೆ ರಾತ್ರಿ ಸುರಿದ ಭಾರೀ ಬಿರುಗಾಳಿ ಸಹಿತ ಮಳೆ ಬಳ್ಳಾರಿ ನಗರದಲ್ಲಿ ಅವಾಂತರವನ್ನೇ ಸೃಸ್ಠಿಸಿದೆ. ಬಿರುಗಾಳಿ ಸಹಿತ ಮಳೆಗೆ ಬೃಹತ್ ಮರಗಳು ರಸ್ತೆ ಮೇಲೆ ಉರುಳಿ ಬಿದ್ದಿವೆ. ಲೈಟ್ ಕಂಬಗಳು ಸಹ ವಾಲಿವೆ. ಕೆಲವೆಡೆ ಕಾರಿನ ಮೇಲೆ ಮರಗಳು ಬಿದ್ದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಇನ್ನು ತಗ್ಗು ಪ್ರದೇಶಗಳಲ್ಲಿನ ಮನೆಗಳಿಗೆ ನೀರು ನುಗ್ಗಿದೆ. ಬಳ್ಳಾರಿ ನಗರದಲ್ಲಿ ನಿನ್ನೆ ಸಂಜೆಯಿಂದ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ಇಡೀ ರಾತ್ರಿ ಕತ್ತಲೆಯಲ್ಲಿ ಜನ ಕಾಲಕಳೆದಿದ್ದಾರೆ. ನಗರದ ಬಹುತೇಕ ಪಾರ್ಕ್ಗಳು ಜಲಾವೃತವಾಗಿವೆ. ಅತಿ ದೊಡ್ಡ ಮರಗಳು ರಸ್ತೆ ಮೇಲೆ ಬಿದ್ದಿರುವ ಕಾರಣ ರಸ್ತೆ ಸಂಪರ್ಕ ಕಡಿತಗೊಂಡಿತ್ತು, ವಾಹನ ಸವಾರರು ಪರದಾಡಬೇಕಾಯಿತು.

ಸತ್ಯನಾರಾಯಣ ಪೇಟೆಯ ಅಂಡರ್ ಪಾಸ್ ನಲ್ಲಿ ಮಳೆ ನೀರು ಇನ್ನೂ ಹಾಗೆ ನಿಂತಿದ್ದು ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ. ಕೋರ್ಟ್ ಆವರಣದಲ್ಲಿ ವಿದ್ಯುತ್ ತಂತಿಗಳು ತುಂಡಾಗಿದ್ದು ಮರಗಳ ಮೇಲೆ ಬಿದ್ದಿವೆ. ಕಪ್ಪಗಲ್ ರಸ್ತೆಯಲ್ಲಿರುವ ಮನೆಯೊಂದರ ಮೇಲೆ ಮರ ಬಿದ್ದಿದೆ. ಆದರೆ, ಮನೆಯಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ. ಕೆಎಂಎಫ್ ರಸ್ತೆಯಲ್ಲಿ ಸಾಲು, ಸಾಲು ಮರಗಳು ರಸ್ತೆಗೆ ಉರುಳಿವೆ. ಒಟ್ಟಾರೆ ಮಹಾಮಳೆಗೆ ಬಳ್ಳಾರಿ ನಗರ ತತ್ತರಿಸಿದೆ.


ಸಂಬಂಧಿತ ಟ್ಯಾಗ್ಗಳು

Heavy Rain Bellary ಕೋರ್ಟ್ ಆವರಣ ಅಂಡರ್ ಪಾಸ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ