ಎಲ್.ಕೆ ಅಡ್ವಾನಿ ಮತ್ತು ಉಮಾ ಭಾರತಿಗೆ ಸಿಬಿಐ ನ್ಯಾಯಾಲಯದ ಆದೇಶ !

Kannada News

25-05-2017

ನವದೆಹಲಿ :- ಬಾಬ್ರಿ ಮಸೀದಿ ಪ್ರಕರಣ ಕುರಿತಂತೆ, ಸುಪ್ರಿಂ ಕೋರ್ಟ್ ಮರು ವಿಚಾರಣೆ ನಡೆಸುವಂತೆ  ಆದೇಶಿಸಿದ ಹಿನ್ನೆಲೆ, ಬಿಜೆಪಿ ನಾಯಕರಾದ ಎಲ್ .ಕೆ ಅಡ್ವಾನಿ ಮತ್ತು ಉಮಾ ಭಾರತಿಯವರಿಗೆ, ವಿಶೇಷ ಸಿಬಿಐ ನ್ಯಾಯಾಲಯ ಶುಕ್ರವಾರ ಕೋರ್ಟ್ ಮುಂದೆ ಹಾಜರಾಗುವಂತೆ ಆದೇಶಿಸಿದೆ. ಎಲ್.ಕೆ ಅಡ್ವಾನಿ, ಉಮಾ ಭಾರತಿ,ವಿನಯ್ ಕತಿಯಾರ್ ಮತ್ತು ಇತರ ಆರೋಪಿಗಳು ಕೋರ್ಟ್ ಮುಂದೆ ಹಾಜರಾಗುವಂತೆ ಸೂಚಿಸಿದೆ. ಬಾಬ್ರಿ ಮಸೀದಿ ಪ್ರಕರಣವನ್ನು ಉತ್ತರ ಪ್ರದೇಶದ ರಾಯ್ ಬರೇಲಿಯಿಂದ ಲಖ್ನೊ ನ್ಯಾಯಾಲಯಕ್ಕೆ ಸುಪ್ರಿಂ ಕೋರ್ಟ್ ವರ್ಗಾವಣೆ ಮಾಡಿದ್ದು,  ಪ್ರಕರಣದ ವಿಚಾರಣೆ ನಡೆಸಿ ಎರಡು ವರ್ಷಗಳಲ್ಲಿ ಪೂರ್ಣಗೊಳಿಸುವಂತೆ ಸೂಚಿಸಿದೆ.

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ