ಕಾಂಗ್ರೆಸ್ ನಾಯಕರ ದೆಹಲಿ ಭೇಟಿ ದಿಢೀರ್ ರದ್ದು

karnataka: Congress leader

04-06-2018

ಬೆಂಗಳೂರು: ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಎರಡೂ ಪಕ್ಷಗಳಿಗೆ ಖಾತೆಗಳ ಹಂಚಿಕೆಯಾಗಿದ್ದು ಸಚಿವರ ಪ್ರಮಾಣವಚವಷ್ಟೇ ಬಾಕಿ ಇದೆ. ಇನ್ನು ಕಾಂಗ್ರೆಸ್ ನ ಹಲವು ಶಾಸಕರು, ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ ಇದಕ್ಕೆ ಎಐಸಿಸಿ ಅಧ್ಯಕ್ಷರ ಅನುಮೋದನೆ ಬೇಕಿದೆ. ಈ ಕುರಿತು ಚರ್ಚಿಸಲು, ಇಂದು ಬೆಳಿಗ್ಗೆ ದೆಹಲಿಗೆ ತೆರಳಲು ಮಾಜಿ ಸಿಎಂ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್, ಡಿ.ಕೆ ಶಿವಕುಮಾರ್ ಸಿದ್ದರಾಗಿದ್ದರು. ಆದರೆ, ಇದರ ಸದ್ಯಕ್ಕೆ ದೆಹಲಿಗೆ ಬರುವುದು ಬೇಡ ಎಂದು ಹೈಕಮಾಂಡ್ ಸಂದೇಶ ರವಾನಿಸಿದೆ.

ರಾಜ್ಯ ಕಾಂಗ್ರೆಸ್ ನಾಯಕರಿಗೆ ಗುಲಾಂನಬಿ ಆಜಾದ್ ಮತ್ತು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ ವೇಣುಗೋಪಾಲ್ ಮಾಹಿತಿ ರವಾನಿಸಿದ್ದಾರೆ. ಇಂದು ಬೆಳಿಗ್ಗೆ ದೆಹಲಿಗೆ ಹೋಗಲು ಸಿದ್ಧಗೊಂಡಿದ್ದ ಕಾಂಗ್ರೆಸ್ ನಾಯಕರ ಪ್ರಯಾಣ ರದ್ದುಗೊಂಡಿದೆ. ದೆಹಲಿಗೆ ಸಚಿವಾಕಾಂಕ್ಷಿಗಳು ಬರಬಹುದು ಎಂಬ ಕಾರಣಕ್ಕೆ ದೆಹಲಿ ಭೇಟಿ ಬೇಡವೆಂದಿದ್ದಾರೆ. ಹೀಗಾಗಿ ಸಚಿವರ ಪಟ್ಟಿ ತೆಗೆದುಕೊಂಡು ಬರುವುದು ಬೇಡ. ಆದರೆ, ಪಟ್ಟಿಯನ್ನು ಕಳುಹಿಸಿಕೊಡುವಂತೆ ಸೂಚಿಸಿದ್ದಾರೆ. ಅವಶ್ಯಕತೆ ಇದ್ದಲ್ಲಿ ಮಾತ್ರ ಬರಲು ತಿಳಿಸುತ್ತೇವೆ ಎಂಬ ಮಾಹಿತಿಯನ್ನು ಹೈಮಾಂಡ್ ರವಾನಿಸಿದೆ.

ತಮ್ಮ ಬೆಂಬಲಿಗರ ಪರ ಬ್ಯಾಟಿಂಗ್ ಮಾಡಲು ಭೇಟಿಗೆ ಅವಕಾಶ ಕೇಳಿರುವ ಪರಮೇಶ್ವರ್, ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಅವರಿಗೆ ಈ ಕುರಿತು ರಾಹುಲ್ ಗಾಂಧಿಯೊಂದಿಗೆ ಮಾತನಾಡಿ ಮಾಹಿತಿ ರವಾನೆ ಮಾಡುತ್ತೇನೆ ಎಂದಿದ್ದಾರೆ ವೇಣುಗೋಪಾಲ್. ಪಟ್ಟಿ ಫೈನಲ್ ಗೂ ಮೊದಲು ರಾಹುಲ್ ಭೇಟಿ ಮಾಡಲು ಕಾದು ಕುಳಿತಿದ್ದಾರೆ ರಾಜ್ಯ ಕೈ ನಾಯಕರು.


ಸಂಬಂಧಿತ ಟ್ಯಾಗ್ಗಳು

Congress Delhi ಹೈಮಾಂಡ್ ಕೆ.ಸಿ ವೇಣುಗೋಪಾಲ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ