ವೈದ್ಯರ ನಿರ್ಲಕ್ಷ್ಯ ಬಾಣಂತಿ ಸಾವು!

Doctors neglect: A lady died at BRIMS!

04-06-2018

ಬೀದರ್: ವೈದ್ಯರ ನಿರ್ಲಕ್ಷ್ಯಕ್ಕೆ ಬಾಣಂತಿ ಸಾವನ್ನಪ್ಪಿರುವ ದಾರುಣ ಘಟನೆ ಬೀದರ್ ನ ಬ್ರೀಮ್ಸ್ ಆಸ್ಪತ್ರೆಯಲ್ಲಿ ಬೆಳಕಿಗೆ ಬಂದಿದೆ. ಮಗು ಬದುಕುಳಿದಿದ್ದು, ತುರ್ತು ನಿಗಾ ಘಟಕದಲ್ಲಿ ಇಡಲಾಗಿದೆ. ಹೆಂಡತಿಯನ್ನು ಕಳೆದುಕೊಂಡಿರುವ ಜಗದೀಶ್ ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಸ್ಪತ್ರೆ ಎದುರಿಗೆ ಧರಣಿ ಕುಳಿತಿರುವ ಪತಿ ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ. ‘ನನ್ನ ಪತ್ನಿ ಮೀನಾಕ್ಷಿ ಆರೋಗ್ಯವಾಗಿದ್ದಳು. ಆದರೂ ಅವಳು ಸಾವನ್ನಪ್ಪಿದ್ದಾಳೆ. ಇದಕ್ಕೆ ವೈದ್ಯರ ನಿರ್ಲಕ್ಷ್ಯವೇ ಕಾರಣ' ಎಂದು ಆರೋಪಿಸಿದ್ದಾರೆ. ಮೃತ ಮೀನಾಕ್ಷಿ ಕುಟುಂಬ ಹುಮ್ನಾಬಾದ್ ತಾಲ್ಲೂಕಿನ ತಾಳಮಡಗಿಯ ನಿವಾಸಿಗಳು. ಹೆರಿಗೆಗೆಂದು ಜಿಲ್ಲಾಸ್ಪತ್ರೆಗೆ ಬಂದಿದ್ದರು.


ಸಂಬಂಧಿತ ಟ್ಯಾಗ್ಗಳು

BRIMS Hospital ಜಿಲ್ಲಾಸ್ಪತ್ರೆ ಬಾಣಂತಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ