ಜೂನ್ 2ನೇ ವಾರದಲ್ಲಿ ಮೈತ್ರಿ ಸರ್ಕಾರದ ಬಜೆಟ್?

cong-jds Alliance government budget may on June 2nd?

02-06-2018

ಬೆಂಗಳೂರು: ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಖಾತೆಗಳ ಹಂಚಿಕೆ ಖಾತ್ರಿಯಾದ ಬೆನ್ನಲ್ಲೇ ಜಂಟಿ ಸರ್ಕಾರದ ಮೊದಲ ಬಜೆಟ್ಗೆ ಸಿದ್ಧತೆ ನಡೆಸಿದೆ. ಮುಂದಿನ ವಾರ ಬುಧವಾರದಂದು ಹಲವು ಶಾಸಕರು ಸಚಿವರಾಗಿ ಖಾತೆಗಳ ಜವಾಬ್ದಾರಿ ಹೊರಲಿದ್ದಾರೆ. ನೂತನ ಸಚಿವ ಸಂಪುಟ ಸ್ಥಾಪನೆಯಾಗಿದೆ ಎಂದು ಮೈತ್ರಿ ಸರ್ಕಾರ ಹೇಳಿಕೊಂಡಿದೆ.

ಇನ್ನು ಬಜೆಟ್ ಹಿನ್ನೆಲೆ ಪೂರ್ವಭಾವಿ ಮತ್ತು ಪರಿಶೀಲನಾ ಸಭೆ, ಸಿಎಂ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ವಿವಿಧ ಇಲಾಖೆಗಳೊಂದಿಗೆ ನಡೆಯಲಿದೆ. ಕೃಷಿ, ತೋಟಗಾರಿಕೆ, ರೇಷ್ಮೆ ಇಲಾಖೆ, ಸಕ್ಕರೆ ಕಾರ್ಖಾನೆಗಳಿಂದ ರೈತರಿಗೆ ಬರಬೇಕಾದ ಬಾಕಿ ಕುರಿತು ಪರಿಶೀಲನಾ ಸಭೆ, ಹೊಸ ಯೋಜನೆಗಳ ಜಾರಿ, ಇಲ್ಲಿಯವರೆಗೆ ಪರಿಣಾಮಕಾರಿಯಾದ ಯೋಜನೆಗಳಾವುವು, ಯಾವುದು ಬೇಡ, ಯಾವುದು ಬೇಕು ಅನ್ನೋ ನಿಟ್ಟಿನಲ್ಲಿ ಸಭೆ ನಡೆಸಲಿದ್ದಾರೆ ಸಿಎಂ ಕುಮಾರ ಸ್ವಾಮಿ. ಎಲ್ಲ ಅಂದುಕೊಂಡಂತಾದರೆ ಜೂನ್ 2ನೇ ವಾರದಲ್ಲಿ ಬಜೆಟ್ ಮಂಡನೆಯಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.


ಸಂಬಂಧಿತ ಟ್ಯಾಗ್ಗಳು

budget congress-Jds ಪರಿಣಾಮಕಾರಿ ಸಚಿವ ಸಂಪುಟ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ