‘ಕಾಂಗ್ರೆಸ್ ಸರ್ಕಾರ ಕೊಟ್ಟ ಸಾಲ ನಾವು ವಸೂಲಿ ಮಾಡುತ್ತಿದ್ದೇವೆ’

C.T Ravi reaction on pejawar swamiji comment

02-06-2018

ಬಳ್ಳಾರಿ: ಪೇಜಾವರ ಶ್ರೀಗಳು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಸಾಧಿಸಿಲ್ಲ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಶಾಸಕ ಸಿಟಿ ರವಿ, ಕೇಂದ್ರ ಸರ್ಕಾರದ ಸಾಧನೆ ಜನರಿಗೆ ತಲುಪುತ್ತಿಲ್ಲ ಬದಲಾಗಿ ಅಪಪ್ರಚಾರ ಜನರಿಗೆ ತಲುಪುತ್ತಿದೆ, ದೇಶದ ಎಲ್ಲ ವಿರೋಧ ಪಕ್ಷಗಳು ಒಂದಾಗಿವೆ ಎಂದು ಕಿಡಿಕಾರಿದ್ದಾರೆ. ಪೇಜಾವರ ಶ್ರೀಗಳಿಗೆ ಸರ್ಕಾರದ ಸಾಧನೆ ಮನವರಿಕೆ ಮಾಡಿಕೊಡುತ್ತೇವೆ, ಪೇಜಾವರ ಶ್ರೀಗಳು ಹತ್ತು ವರ್ಷದ ಯುಪಿಎ ಮತ್ತು ನಾಲ್ಕು ವರ್ಷದ ಎನ್ ಡಿಎ ಸರ್ಕಾರ ಹೊಂದಾಣಿಕೆ ಮಾಡಿ ನೋಡಬೇಕಿದೆ ಎಂದರು.

ಲಲಿತ್ ಮೋದಿ, ‌ವಿಜಯ್ ಮಲ್ಯ ಸೇರಿದಂತೆ ಯಾರ ಮೇಲೂ‌ ಮೃದು ಧೋರಣೆ ಇಲ್ಲ. ಸಾಲ ಕೊಟ್ಟಿರೋದು ಕಾಂಗ್ರೆಸ್ ಸರ್ಕಾರ ಅದರೆ ನಾವು ವಸೂಲಿ ಮಾಡುತ್ತಿದ್ದೇವೆ ಎಂದು ಕಾಂಗ್ರೆಸ್ಗೆ ಟಾಂಗ್ ನೀಡಿದ್ದಾರೆ. ದೇಶದ ವಿವಿಧ ಮತ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಸೋಲು ಕಂಡಿದೆ, ಇದನ್ನು ಗಂಭೀರವಾಗಿ ಪರಿಗಣಿಸಿದ್ದೇವೆ, ವಿರೋಧ ಪಕ್ಷಗಳು ಒಗ್ಗಟ್ಟಾಗಿದ್ದಕ್ಕೆ ಸೋಲಾಗಿದೆ ಎಂದರು.


ಸಂಬಂಧಿತ ಟ್ಯಾಗ್ಗಳು

C.T Ravi pejawar swamiji ಲಲಿತ್ ಮೋದಿ ವಿಜಯ್ ಮಲ್ಯ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ