ಜಾತಿ-ಧರ್ಮ ವಿಚಾರ: ಕಾನೂನನ್ನು ಗಾಳಿಗೆ ತೂರಿದ ಶಾಲೆ

Caste-Religion: famous school that violated rules

02-06-2018

ಬೆಳಗಾವಿ: ಪ್ರತಿಷ್ಠಿತ ಶಾಲೆಯಲ್ಲಿ ಧರ್ಮದ ಹೆಸರಲ್ಲಿ ಮಕ್ಕಳನ್ನು ವಿಂಗಡಣೆ ಮಾಡುತ್ತಿರುವುದು ತಿಳಿದು ಬಂದಿದೆ. ಚಿಕ್ಕೋಡಿ ಪಟ್ಟಣದ ಹೊರವಲಯದಲ್ಲಿರುವ ಸೆಂಟ್ ಫ್ರಾನ್ಸಿಸ್ ಆಫ್ ಅಸ್ಸಿಸಿ ಶಾಲೆಯಲ್ಲಿ ಈ ರೀತಿಯ ಘಟನೆ ಬೆಳಕಿಗೆ ಬಂದಿದೆ. ಧರ್ಮದ ಆಧಾರದ ಮೇಲೆ ಮಕ್ಕಳನ್ನ ವಿಂಗಡಿಸಿ ಗೋಡೆ ಬರಹಗಳನ್ನೂ ಸಹ ಬರೆದಿರುವುದಾಗಿ ಹೇಳಲಾಗುತ್ತಿದೆ.

ಶಾಲಾ ಮಕ್ಕಳ ಧರ್ಮ ಹಾಗೂ ಜಾತಿ ದಾಖಲೆಗಳನ್ನ ಫೈಲ್ ಗಳಲ್ಲಿ ಮಾತ್ರ ನಿರ್ವಹಣೆ ಮಾಡಬೇಕು ಎಂಬ ಕಾನೂನನ್ನು ಗಾಳಿಗೆ ತೂರಿದ ಶಾಲಾ ಮಂಡಳಿ, ಧರ್ಮದ ಹೆಸರಲ್ಲಿ ಮೇಲೆ ಮಕ್ಕಳನ್ನ ವಿಂಗಡಣೆ ಮಾಡಿ ಧರ್ಮ,ಜಾತಿಯ ವಿಷ ಬೀಜ ಬಿತ್ತುತ್ತಿದೆ. ಕಾನೂನು ಉಲ್ಲಂಘನೆ ಮಾಡಿದ್ದಕ್ಕೆ ನೊಟೀಸ್ ನೀಡಲು ಶಿಕ್ಷಣ ಇಲಾಖೆ ಮುಂದಾಗಿದೆ ಎಂಬ ಅಂಶವೂ ತಿಳಿದು ಬಂದಿದೆ. ಆಡಳಿತ ಮಂಡಳಿ ವಿರುದ್ಧ ಕ್ರಮದ ಭರವಸೆ ನೀಡಿದ್ದಾರೆ ಚಿಕ್ಕೋಡಿ ಡಿಡಿಪಿಐ ಎಂ.ಜಿ.ದಾಸರ.


ಸಂಬಂಧಿತ ಟ್ಯಾಗ್ಗಳು

Religion Cast ಡಿಡಿಪಿಐ ನೊಟೀಸ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ