ವಿದ್ಯುತ್ ಶಾಕ್ ಗೆ ರೈತ ಬಲಿ

Neglect of gescom : A Farmer Died with electric shock!

02-06-2018

ಕೊಪ್ಪಳ: ಜೆಸ್ಕಾಂ ನಿರ್ಲಕ್ಷ್ಯದಿಂದ ರೈತರೊಬ್ಬರು ಮೃತಪಟ್ಟಿರುವ ದಾರುಣ ಘಟನೆ ಕೊಪ್ಪಳದಲ್ಲಿ ನಡೆದಿದೆ. ಕೊಪ್ಪಳ ತಾಲ್ಲೂಕಿನ ಮೋರನಾಳ ಗ್ರಾಮದ ನಾಗಯ್ಯ ತಂದಿ ಸಿದ್ದಯ್ಯ ಗುರುವಿನ (36) ಮೃತ ರೈತ. ಮನೆಗೆ ಹೊಂದಿಕೊಂಡೇ ಇರುವ ತಮ್ಮ ಹೊಲದಲ್ಲಿ ಕೆಲಸದಲ್ಲಿ ತೊಡಗಿದ್ದಾಗ 33 ಕೆವಿ ವಿದ್ಯುತ್ ತಂತಿಯಿಂದ ವಿದ್ಯುತ್ ಹರಿದು ಸಾವು ಸಂಭವಿಸಿದೆ.

ಈ ಭಾಗದ 33 ಕೆವಿ ವಿದ್ಯುತ್ ಲೈನ್ ಗಳನ್ನು ಬೇಕಾ ಬಿಟ್ಟಿಯಾಗಿ ಎಳೆದಿರುವುದರಿಂದ ನಿರಂತರ ವಿದ್ಯುತ್ ಅವಘಡಗಳು ಸಂಭವಿಸುತ್ತಿವೆ. ದೂರು ಕೊಟ್ಟರೂ ಜೆಸ್ಕಾಂ ಅಧಿಕಾರಿಗಳು ಸ್ಪಂದಿಸಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಅಳವಂಡಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸಿದ್ದಯ್ಯ ಸಾವಿಗೆ ಜೆಸ್ಕಾಂ ನಿರ್ಲಕ್ಷ್ಯವೇ ಕಾರಣವೆಂದು ದೂರಿದ್ದಾರೆ.


ಸಂಬಂಧಿತ ಟ್ಯಾಗ್ಗಳು

33 kv Farmer ಜೆಸ್ಕಾಂ ವಿದ್ಯುತ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ