ವಿವಿ ಪ್ಯಾಟ್ ರಶೀದಿ ಪತ್ತೆ: ಮತಗಟ್ಟೆ ಅಧಿಕಾರಿ ಅರೆಸ್ಟ್

VVPAT printed slip Detected: Booth Officer Arrested!

02-06-2018

ವಿಜಯಪುರ: ತೀವ್ರ ಚರ್ಚೆಗೆ ಗ್ರಾಸವಾಗಿದ್ದ ವಿಜಯಪುರ ಜಿಲ್ಲೆಯ ಉಕ್ಕಲಿಯಲ್ಲಿ ವಿವಿ ಪ್ಯಾಟ್ ರಶೀದಿ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಮತಗಟ್ಟೆ ಅಧಿಕಾರಿ ರವೀಂದ್ರ ನಂದವಾಡಗಿ ಅವರನ್ನು ಬಂಧಿಸಿದ ಪೊಲೀಸರು, ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.

ಜಿಲ್ಲೆಯ ಬಸವನ ಬಾಗೇವಾಡಿ ಮತಕ್ಷೇತ್ರದ ಉಕ್ಕಲಿ ಗ್ರಾಮದಲ್ಲಿ ಮೇ 27ರಂದು ವಿವಿ ಪ್ಯಾಟ್ ರಶೀದಿ ಪತ್ತೆಯಾಗಿತ್ತು. ಈ ಸಂಬಂಧ ಪರಾಜಿತ ಜೆಡಿಎಸ್ ಅಭ್ಯರ್ಥಿ ಸೋಮನಗೌಡ ಪಾಟೀಲ ರಾಜ್ಯ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದರು. ಸ್ಥಳೀಯ ಮನಗೂಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣದ ತನಿಖೆ ನಡೆಸುವಂತೆ ದೂರು ಕೂಡ ದಾಖಲಿಸಿದ್ದರು.

ಉಕ್ಕಲಿ ಗ್ರಾಮದ ನ್ಯೂ ಇಂಗ್ಲಿಷ್ ಶಾಲೆಯ ಮತಗಟ್ಟೆ ಸಂಖ್ಯೆ.12ಕ್ಕೆ ಸಂಬಂಧಿಸಿದ‌ ರಸೀದಿ ಸಿಕ್ಕಿದ್ದು, ರಶೀದಿಯನ್ನು ವಶಕ್ಕೆ ಪಡೆದು ಮತಗಟ್ಟೆಯಲ್ಲಿ ಕಾರ್ಯನಿರ್ವಹಿಸಿದ್ದ ಅಧಿಕಾರಿಗಳನ್ನು ತೀವ್ರ ವಿಚಾರಣೆಗೊಳಪಡಿಸಿದ್ದರು. ನಂತರ ಮತಗಟ್ಟೆ ಅಧಿಕಾರಿ ರವೀಂದ್ರ ನಂದವಾಡಗಿ ಅವರನ್ನು ನಿನ್ನೆ ತಡರಾತ್ರಿ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ ಎಂದು ವಿಜಯಪುರ ಎಸ್ಪಿ ಪ್ರಕಾಶ ನಿಕ್ಕಂ ಹೇಳಿದ್ದಾರೆ.


ಸಂಬಂಧಿತ ಟ್ಯಾಗ್ಗಳು

election polling booth ನ್ಯಾಯಾಂಗ ವಿವಿ ಪ್ಯಾಟ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ