ಜಿಲ್ಲಾಸ್ಪತ್ರೆ ಅವ್ಯವಸ್ಥೆ ಕಂಡು ದಂಗಾದ ಜಿಲ್ಲಾಧಿಕಾರಿ

District collector shocked while visiting district hospital bidar

02-06-2018

ಬೀದರ್: ಬೀದರ್ ಜಿಲ್ಲಾಸ್ಪತ್ರೆಗೆ ದಿಢೀರ್ ಭೇಟಿ ನೀಡಿದ ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ್ ಆಸ್ಪತ್ರೆಯ ಅವ್ಯವಸ್ಥೆಯನ್ನು ಕಂಡು ದಂಗಾಗಿದ್ದಾರೆ. ಜಿಲ್ಲಾಸ್ಪತ್ರೆಯ ವಿವಿಧೆಡೆ ಪರಿಶೀಲನೆ ನಡೆಸಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಆಸ್ಪತ್ರೆಯಿಂದ ನಿತ್ಯ ಎರಡ್ಮೂರು ದೂರುಗಳು ಬರುತ್ತವೆ. ಇಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಅವುಗಳಿಗೆ ತಿಂಗಳಲ್ಲೇ ಶಾಶ್ವತ ಪರಿಹಾರ ಕಂಡುಕೊಳ್ಳಲಾಗುತ್ತೆ ಎಂದು ಭರವಸೆ ನೀಡಿದರು. ಇಲ್ಲಿನ ವೈದ್ಯರು ನೈತಿಕತೆ ಕಳೆದುಕೊಳ್ಳಬಾರದು, ಜನರು ಬಂದಾಗ ಅವರ ಜೊತೆ ಉತ್ತಮವಾಗಿ ಸ್ಪಂದಿಸಬೇಕು, ಒಂದು ವೇಳೆ ಮತ್ತೆ ನಿರ್ಲಕ್ಷ್ಯದ ಪ್ರಕರಣಗಳು ಕೇಳಿ ಬಂದಲ್ಲಿ ಅವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

District Collector Hospital ಜಿಲ್ಲಾಧಿಕಾರಿ ಮಾಧ್ಯಮ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ