ಡಿಕೆಶಿಗೆ ಕೆ.ಎಸ್.ಈಶ್ವರಪ್ಪ ಪ್ರಶ್ನೆ!

K.S.Eshwarappa Questioned D.K shivakumar

02-06-2018

ಶಿವಮೊಗ್ಗ: ‘ರಾಜ್ಯ ಸರ್ಕಾರ ಅಂಗವಿಕಲ ಮಗು ಇದ್ದಂಗೆ, ಇದಕ್ಕೆ ಎರಡು ತಲೆ, ನಾಲ್ಕು ಕಾಲು, ಎಂಟು ಕೈ ಹೀಗೆ ವಿಚಿತ್ರವಾದ ಮಗು ಹುಟ್ಟಿದೆ’ ಈ ಮಗು ಬಹಳ ದಿನ ಉಳಿಯಲ್ಲ. ವಿಚಿತ್ರವಾಗಿ ಹುಟ್ಟಿರುವ ಮಗುವನ್ನು ಉಳಿಸಿಕೊಳ್ಳಲು ಯತ್ನಿಸುತ್ತಿದ್ದಾರೆ ಎಂದು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವನ್ನು ಶಾಸಕ ಕೆ.ಎಸ್.ಈಶ್ವರಪ್ಪ ಲೇವಡಿ ಮಾಡಿದ್ದಾರೆ.

ಸಚಿವ ಸಂಪುಟ ಬುಧವಾರ ರಚನೆ ಮಾಡುತ್ತೇವೆ ಎಂದು ಹೇಳಿದ್ದಾರೆ. ಬಹಳಷ್ಟು ಜನ ಮಂತ್ರಿ ಗಿರಿಗಾಗಿ ಕಾಯುತ್ತಿದ್ದಾರೆ, ನೋಡೋಣ ಇವೆಲ್ಲವನ್ನ ಹೇಗೆ ನಿಭಾಯಿಸುತ್ತಾರೆ. ಸರ್ಕಾರವನ್ನು ತಮ್ಮ ಹಿಡಿತದಲ್ಲಿಟ್ಟುಕೊಳ್ಳಲು ಕಾಂಗ್ರೆಸ್ 'ಸಮನ್ವಯ ಸಮಿತಿ' ರಚನೆ ಮಾಡಿ ಸಿದ್ದರಾಮಯ್ಯನವರನ್ನು ಅಧ್ಯಕ್ಷರನ್ನಾಗಿ ಮಾಡಿಕೊಂಡಿದ್ದಾರೆ. ಸಮನ್ವಯ ಸಮಿತಿ ಯಾಕೆ ಬೇಕು ಅಂತ ದೇವೆಗೌಡರು ಹೇಳುತ್ತಿದ್ದಾರೆ. ಬೇಷರತ್ ಬೆಂಬಲ ನೀಡುತ್ತೇವೆ ಎಂದು ಹೇಳಿದ್ದ ಕಾಂಗ್ರೆಸ್ ದಿನೇ ದಿನೇ ಷರತ್ತುಗಳನ್ನು ಹಾಕುತ್ತಿದೆ. ಜೆಡಿಎಸ್ ಮೇಲೆ ಸವಾರಿ ಮಾಡಲು ಯತ್ನಿಸುತ್ತಿದೆ ಎಂದರು.

ಐಟಿ ದಾಳಿ ವಿಚಾರಕ್ಕೆ ಪ್ರತಿಕ್ರಿಯಿಸಿ, ಕೇಂದ್ರದಲ್ಲಿ ಯುಪಿಎ ಸರ್ಕಾರ ಇದ್ದಾಗ ಬಿಜೆಪಿಯವರ ಮೇಲೆ ನಡೆದ ದಾಳಿಯಲ್ಲಿ ಕಾಂಗ್ರೆಸ್ ಕೈವಾಡವಿತ್ತೆ? ಆದಾಯ ತೆರಿಗೆ ಇಲಾಖೆ ಸ್ವತಂತ್ರವಾದ ಇಲಾಖೆಯಾಗಿದೆ. ಅಲ್ಲಿ ಯಾರ ಹಸ್ತಕ್ಷೇಪ ನಡೆಯುವುದಿಲ್ಲ. ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗ, ಬಿಜೆಪಿಯವರ ಮೇಲೆ, ಬಿಜೆಪಿ ಅಧಿಕಾರದಲ್ಲಿ ಇದ್ದಾಗ ಕಾಂಗ್ರೆಸ್ ನವರ ಮೇಲೆ ದಾಳಿ ನಡೆಸುವಂತಿಲ್ಲ ಅಂತ ಕಾನೂನು ಮಾಡಬೇಕೆ? ಎಂದು ಡಿ.ಕೆ.ಶಿವಕುಮಾರ್ ರವರಿಗೆ ಪ್ರಶ್ನೆ ಮಾಡಿದರು.


ಸಂಬಂಧಿತ ಟ್ಯಾಗ್ಗಳು

K.S.Eshwarappa D.K.Shivakumar ಸವಾರಿ ಕೈವಾಡ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ