ಪಿಎಸ್ಐ ಮೇಲೆ ಕಲ್ಲು ತೂರಾಟ!

Raid on illegal sand mafia: stones were thrown on psi

02-06-2018

ವಿಜಯಪುರ: ಇಂಡಿ ತಾಲ್ಲೂಕಿನ ಭೀಮಾ ತೀರದ ಗಡಿ ಗ್ರಾಮ ದಸೂರು ಬಳಿ ಅಕ್ರಮ ಮರಳು ಗಣಿಗಾರಿಕೆ ಪ್ರಶ್ನಿಸಲು ಹೋದ ಪಿಎಸ್ಐ ಮೇಲೆ ಕಲ್ಲು ತೂರಾಟ ನಡೆದಿದೆ. ಚಡಚಣ ಪಿಎಸ್ಐ ಗೋಪಾಲ್ ಹಳ್ಳೂರು ಮೇಲೆ ಕಲ್ಲು ತೂರಾಟ ನಡೆದಿದೆ. ಮಹಾರಾಷ್ಟ್ರದ ಗಡಿ ಗ್ರಾಮ ದಸೂರಿನಲ್ಲಿ ಕಳೆದ ಕೆಲ ತಿಂಗಳುಗಳಿಂದ ಅಕ್ರಮ ಮರಳು ದಂಧೆ ಅವ್ಯಾಹತವಾಗಿ ನಡೆಯುತ್ತಿದ್ದು, ಅಕ್ರಮ ಮರಳು ಲಾರಿಗಳಿಂದ ದಸೂರು ಗ್ರಾಮಸ್ಥರು ಕಂಗೆಟ್ಟಿದ್ದರು. ಈ ಕುರಿತು ಗ್ರಾಮಸ್ಥರೇ ಪೊಲೀಸರಿಗೆ ಮಾಹಿತಿ ನೀಡಲಾಗಿ, ಪಿಎಸ್ಐ ಗೋಪಾಲ್ ಹಳ್ಳೂರು ಅವರು ಮರಳು ದಂಧೆ ಅಡ್ಡೆಗಳ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ದಂಧೆಕೋರರು ಪಿಎಸ್ಐ ಮೇಲೆಯೇ ಕಲ್ಲು ತೂರಾಟ ನಡೆಸಿದ್ದಾರೆ. ಘಟನೆಯಲ್ಲಿ ಪಿಎಸ್ಐಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಒಂದು ಬೈಕ್ ಜಖಂಗೊಂಡಿದೆ. ಪಿಎಸ್ಐ ಮೇಲೆ ಕಲ್ಲು ತೂರಾಟ ಖಂಡಿಸಿ‌ ದಸೂರು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಹಾರಾಷ್ಟ್ರದಿಂದ ಬಂದು ಅಕ್ರಮ ಮರಳು ದಂಧೆ‌ ನಡೆಸುತ್ತಿರುವವರ ವಿರುದ್ಧ ಕೂಡಲೆ ಕ್ರಮ ಜರುಗಿಸುವಂತೆ ಒತ್ತಾಯಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

sand mafia PSI ದಂಧೆ ಕಲ್ಲು ತೂರಾಟ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ