ಶಾಸಕರೊಬ್ಬರಿಗೆ ಸೇರಿದ ಕಾಲೇಜು ವಿರುದ್ಧ ಡೊನೇಷನ್ ಆರೋಪ!

DONATION charges against college belonging to a MLA!

02-06-2018

ವಿಜಯಪುರ: ಶಾಸಕರೊಬ್ಬರಿಗೆ ಸೇರಿದ ಶಿಕ್ಷಣ ಸಂಸ್ಥೆಯಲ್ಲಿ ಡೊನೇಷನ್ ಹೆಸರಿನ ವಸೂಲಿ ದಂಧೆ ನಡೆಯುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಸಿಂದಗಿ ಶಾಸಕ ಎಂ.ಸಿ.ಮನಗೂಳಿ ಅವರಿಗೆ ಸೇರಿದ ಎಚ್.ಜಿ.ಪಿಯು ಕಾಲೇಜಿನಲ್ಲಿ ಈ ರೀತಿಯ ಅಕ್ರಮ ನಡೆಯುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

ವಿಜಯಪುರ ಜಿಲ್ಲೆ ಸಿಂದಗಿ ಪಟ್ಟಣದಲ್ಲಿರುವ ಎಚ್.ಜಿ.ಪಿಯು ಕಾಲೇಜಿಗೆ ಶಾಸಕ ಎಂ.ಸಿ.ಮನಗೂಳಿ ಅವರೇ ಚೇರ್ಮನ್. ಶಿಫಾರಸ್ಸಿನ ಮೇರೆಗೆ ಬರುವ ವಿದ್ಯಾರ್ಥಿಗಳಿಗೆ 5-6 ಸಾವಿರ ಹೆಚ್ಚುವರಿ ಹಣ ವಸೂಲಿ ಮಾಡಲಾಗುತ್ತದೆ. ಇನ್ನಿತರ ಹಾಗು ನೇರವಾಗಿ ಹೋಗುವ ವಿದ್ಯಾರ್ಥಿಗಳಿಂದ ಸುಮಾರು 10-12 ಸಾವಿರ ಹಣ ಪಡೆಯಲಿದೆ ಎಚ್.ಜಿ.ಶಿಕ್ಷಣ ಸಂಸ್ಥೆ.

ಅಡ್ಮಿಷನ್ ಗಾಗಿ ತನ್ನ ಕೊಠಡಿಯಲ್ಲಿ ಬರುವ ವಿದ್ಯಾರ್ಥಿಗಳಿಗೆ ಗುಪ್ತವಾಗಿ ಚೀಟಿ ಬರೆದು ಕೊಡುವ ಅರವಿಂದ ಮನಗೂಳಿ(ಶಾಸಕ ಎಂ.ಸಿ.ಮನಗೂಳಿ ಪುತ್ರ) ತಾನು ಬರೆದುಕೊಟ್ಟ ಚೀಟಿಯನ್ನು ಸೂಚಿಸಿದ ಸಿಬ್ಬಂದಿ ಬಳಿ ಹೋಗಿ ವಿದ್ಯಾರ್ಥಿಗಳು ಹೆಚ್ಚುವರಿ ಹಣ ತುಂಬಬೇಕು. ಆದರೆ, ವಿದ್ಯಾರ್ಥಿಗಳಿಗೆ ಕೊಡುವುದು 2 ಸಾವಿರ ಕಟ್ಟಿದ ರಶೀದಿ ಮಾತ್ರ. ಎಚ್.ಜಿ.ಪಿಯು ಕಾಲೇಜಿನ ಆಡಳಿತ ಮಂಡಳಿ ಹಾಗು ಶಾಸಕ ಮನಗೂಳಿ ಶಿಕ್ಷಣವನ್ನು ವ್ಯಾಪಾರೀಕರಣ ಮಾಡಿಕೊಂಡಿದ್ದಾರೆ ಎಂದು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.


ಸಂಬಂಧಿತ ಟ್ಯಾಗ್ಗಳು

donation college ವ್ಯಾಪಾರೀಕರಣ ಸಾರ್ವಜನಿಕರು


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ