ಭಾರೀ ಮಳೆ: ಕಗ್ಗತ್ತಲಲ್ಲಿ ಹುಚ್ಚಮನದೊಡ್ಡಿ ಗ್ರಾಮ

Heavy Rain: electric pole fallen on ksrtc bus

02-06-2018

ರಾಮನಗರ: ನಿನ್ನೆ ರಾತ್ರಿ ಸುರಿದ ಬಿರುಗಾಳಿ ಸಹಿತ ಮಳೆಗೆ ರಾಮನಗರದಲ್ಲಿ ಭಾರೀ ಅವಾಂತರವನ್ನೇ ಸೃಷ್ಟಿಸಿದೆ. ಗಾಳಿಯ ರಭಸಕ್ಕೆ ಮರಗಳು, ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ರಾಮನಗರ ತಾಲ್ಲೂಕಿನ ಹುಚ್ಚಮನದೊಡ್ಡಿ ಗ್ರಾಮದಲ್ಲಿ 20ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ನೆಲಕ್ಕೆ ವಾಲಿದ್ದು, ರಾತ್ರಿಯಿಂದ ಗ್ರಾಮಕ್ಕೆ ವಿದ್ಯುತ್ ಸಂಪರ್ಕ ಇಲ್ಲದಂತಾಗಿದೆ. ಕೆಎಸ್ಆರ್ಟಿಸಿ ಬಸ್ ಮೇಲೆ ವಿದ್ಯುತ್ ಕಂಬವೊಂದು ಬಿದ್ದು ಬಸ್ ಜಖಂ ಗೊಂಡಿದೆ. 20ಕ್ಕೂ ಹೆಚ್ಚು ತೆಂಗಿನ ಮರಗಳು ಸೇರಿದಂತೆ ಅನೇಕ ಮರಗಳು ಧರೆಗೆ ಉರುಳಿವೆ. ಮಳೆಯಿಂದಾಗಿ ರಾತ್ರಿ ಇಡೀ ಗ್ರಾಮದ ಜನ ಕಗ್ಗತ್ತಲಲ್ಲೇ ಕಾಲ ಕಳೆದಿದ್ದಾರೆ. 

 


ಸಂಬಂಧಿತ ಟ್ಯಾಗ್ಗಳು

Heavy Rain electric pole ವಿದ್ಯುತ್ ಕಂಬ ಗ್ರಾಮ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ