ಪಾವಗಡದಲ್ಲಿ ಆಂಧ್ರ ಪೊಲೀಸರ ದೌರ್ಜನ್ಯ!

Pavagada: Andhra police harassment!

02-06-2018

ತುಮಕೂರು: ಮಟ್ಕಾ ದಂಧೆ ನಡೆಸುತ್ತಿದ್ದ ಆರೋಪದಡಿ ಬಂಧಿಯಾಗಿರುವ ವ್ಯಕ್ತಿಯನ್ನು ಪೊಲೀಸರು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಪಾವಗಡ ತಾಲ್ಲೂಕಿನ ದೊಡ್ಡಳ್ಳಿ ಗ್ರಾಮದ ವೀರೇಶ್ ಎಂಬಾತನ ಮೇಲೆ ಆಂಧ್ರ ಪೊಲೀಸರು ದೌರ್ಜನ್ಯ ನಡೆಸಿದ್ದಾರೆ. ಮಫ್ತಿಯಲ್ಲಿ ಬಂದ ಕಂಬದೂರು ಪೊಲೀಸರು ವೀರೇಶ್ ನನ್ನು ಹಿಡಿದು ಮನಬಂದಂತೆ ಥಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಕೇಸ್ ವಾಪಸ್ ಪಡೆಯಲು 10ಲಕ್ಷ ನೀಡುವಂತೆ ಬೇಡಿಕೆ ಇಟ್ಟಿದ್ದರು ಎಂಬ ಆರೋಪವೂ ಕೇಳಿಬಂದಿದೆ. ಹಣ ಕೊಡದಿದ್ದಾಗ ವೀರೇಶ್ ನನ್ನು ಮಧ್ಯರಾತ್ರಿಯಲ್ಲಿ ಎಳೆದುಕೊಂಡು ಹೋಗಿ ಎರಡು ದಿನ ಅಜ್ಞಾತ ಸ್ಥಳದಲ್ಲಿ ಕಟ್ಟಿಹಾಕಿ ಹಲ್ಲೆ ನಡೆಸಿದ್ದಾರೆ ಎನ್ನಲಾಗುತ್ತಿದೆ. 2.5ಲಕ್ಷ ರೂ. ಕೊಟ್ಟಾಗ ಬಿಟ್ಟು ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ.


ಸಂಬಂಧಿತ ಟ್ಯಾಗ್ಗಳು

illegal police ಆರೋಪ ದೌರ್ಜನ್ಯ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ