ಸಿಇಟಿ ಫಲಿತಾಂಶ ಪ್ರಕಟ

CET Results Released

01-06-2018

ವಿವಿಧ ವೃತ್ತಿಪರ ಕೋರ್ಸ್‍ಗಳ ಪ್ರವೇಶಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ್ದ ಈ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆ ಸಿಇಟಿ ಫಲಿತಾಂಶವನ್ನು ಪ್ರಕಟಿಸಲಾಗಿದೆ.

ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಬೆಂಗಳೂರಿನಲ್ಲಿ ಫಲಿತಾಂಶವನ್ನು ಪ್ರಕಟಿಸಿದರು. ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳ ಹೆಸರುಗಳನ್ನು ಪ್ರಕಟಸಲಾಯಿತು. ಏಪ್ರಿಲ್ 18 ರಿಂದ 20 ರವರೆಗೆ ನಡೆದಿದ್ದ ಈ ಪರೀಕ್ಷೆಗಳಿಗೆ 1 ಲಕ್ಷದ 98 ಸಾವಿರ ವಿದ್ಯಾರ್ಥಿಗಳು ಹಾಜರಾಗಿದ್ದರು.

ವಿಜಯಪುರದ ಪಿಯು ವಿಜ್ಞಾನ ಕಾಲೇಜಿನ ಶ್ರೀಧರ್ ದೊಡ್ಮನಿ, ಇಂಜಿನಿಯರಿಂಗ್ ಹಾಗೂ ಬಿಎಸ್ಸಿ ಕೃಷಿ ವಿಭಾಗದಲ್ಲೂ ಪ್ರಥಮ ರ್ಯಾಂಕ್ ಪಡೆದಿದ್ದಾರೆ. ಪಶುಸಂಗೋಪನೆ ವಿಭಾಗದಲ್ಲಿ ಮಂಗಳೂರಿನ ವಲಾಸಿಲ್ ಪಿಯು ಕಾಲೇಜಿನ ವಿನೂತ್ ಮೇಗೂರ್, ಬಿ ಫಾರ್ಮ ವಿಭಾಗದಲ್ಲಿ ಬೆಂಗಳೂರಿನ ಸುಂದರಹಳ್ಳಿಯ ನಾರಾಯಣ ಟೆಕ್ನೋ ಶಾಲೆಯ ಸುಹಿಲ್ ಗಿರಿನಾಥ್  ಪ್ರಥಮ ರ್ಯಾಂಕ್ ಪಡೆದಿದ್ದಾರೆ.

ಕರ್ನಾಟಕ ಪ್ರದೇಶ ಪ್ರಾಧಿಕಾರದಲ್ಲಿಂದು ವೈದ್ಯಕೀಯ ಶಿಕ್ಷಣ ಇಲಾಖೆಯ ಅಪರ ಮುಖ್ಯ ಪ್ರಧಾನ ಕಾರ್ಯದರ್ಶಿ ವಿ. ಮಂಜುಳಾ ಹಾಗೂ ಉನ್ನತ ಶಿಕ್ಷಣ ಇಲಾಖೆಯ ಕಾರ್ಯದರ್ಶಿ ರಾಜ್‍ಕುಮಾರ್ ಕತ್ರಿ ಸಿಇಟಿ ಫಲಿತಾಂಶ ಬಿಡುಗಡೆ ಮಾಡಿ, ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ಮೊದಲ ಸುತ್ತಿನ ಕೌನ್ಸಿಲಿಂಗ್ ಜೂ. 25 ರಿಂದ ಜುಲೈ 5 ರವರೆಗೆ ನಡೆಯಲಿದ್ದು, ಒಟ್ಟಾರೆ ಪ್ರಕ್ರಿಯೆಯನ್ನು ಆಗಸ್ಟ್ 18 ರೊಳಗೆ ಪೂರ್ಣಗೊಳಿಸುವುದಾಗಿ ಹೇಳಿದರು.

ರಾಜ್ಯದ 430 ಪರೀಕ್ಷಾ ಕೇಂದ್ರಗಳಲ್ಲಿ 19,85,55 ಅಭ್ಯರ್ಥಿಗಳು ಸಿಇಟಿ ಪರೀಕ್ಷೆಗೆ ಅರ್ಜಿ ಸಲ್ಲಿಸಿದ್ದು, 19,2905 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಅವರ ಪೈಕಿ ಇಂಜಿನಿಯರಿಂಗ್ ಕೋರ್ಸ್‍ಗೆ 146063 ವಿದ್ಯಾರ್ಥಿಗಳು ಅರ್ಹತೆ ಪಡೆದಿದ್ದಾರೆ.

ಕೃಷಿ ಕೋರ್ಸ್‍ಗೆ 113999, ಪಶು ಸಂಗೋಪನೆ ಕೋರ್ಸ್‍ಗೆ 115364 ಹಾಗೂ ಬಿ ಫಾರ್ಮ ಮತ್ತು ಡಿ ಫಾರ್ಮ ಕೋರ್ಸ್‍ಗೆ 147543 ವಿದ್ಯಾರ್ಥಿಗಳು ಅರ್ಹತೆ ಪಡೆದಿದ್ದಾರೆ ಎಂದು ಹೇಳಿದರು.

ನೀಟ್ ಪರೀಕ್ಷಾ ಫಲಿತಾಂಶ ಪ್ರಕಟಗೊಂಡ ಬಳಿಕ ಆ ಫಲಿತಾಂಶವನ್ನು ಪರಿಗಣಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.

ಇದೇ 5 ರಿಂದ ದಾಖಲಾತಿಗಳ ಪರಿಶೀಲನೆ ರಾಜ್ಯದ 16 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದ್ದು, ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ 23460460 ತೆರೆಯಲಾಗಿದ್ದು, ವಿದ್ಯಾರ್ಥಿಗಳು ಮತ್ತು ಪೆÇೀಷಕರು ದೂರವಾಣಿ ಕರೆ ಮಾಡಿ ಗೊಂದಲಗಳಿಗೆ ಪರಿಹಾರ ಕಂಡುಕೊಳ್ಳಬಹುದು ಹಾಗೂ ಎಸ್‍ಎಂಎಸ್ ಮೂಲಕ ಪರೀಕ್ಷಾ ಫಲಿತಾಂಶದ ಮಾಹಿತಿಯನ್ನು ಒದಗಿಸಲಾಗಿದೆ.

ರ್ಯಾಂಕ್ ಪಡೆದವರ ವಿವರ

ಇಂಜಿನಿಯರಿಂಗ್ ವಿಭಾಗದಲ್ಲಿ ಮೊದಲ 5 ರ್ಯಾಂಕ್

ಶ್ರೀಧರ್‍ದೊಡ್ಮನಿ ಪಿಯು ವಿಜ್ಞಾನ ಕಾಲೇಜು ವಿಜಯಪುರ

ನಾರಾಯಣಪೈ- ಶಾರದಾ ಸ್ವತಂತ್ರ ಪಿಯು ಕಾಲೇಜು ದಕ್ಷಿಣಕನ್ನಡ

ದಾಬಾಶೋ ಸನ್ಯಾಸಿ ಜಿಂದಾಲ್ ವಿದ್ಯಾಮಂದಿರ ಬಳ್ಳಾರಿ

ತುಹೀನ್ ಗಿರಿನಾಥ್ ನಾರಾಯಣ ವಿ ಟೆಕ್ನೋ ಸ್ಕೂಲ್ ಬೆಂಗಳೂರು

ಅನಿತಾ ಜೇಮ್ಸ್- ನ್ಯಾಷನಲ್ ಪಬ್ಲಿಕ್ ಸ್ಕೂಲ್ ಬೆಂಗಳೂರು.

 

ಬಿಎಸ್ಸಿ ಕೃಷಿ

ಶಿವಕುಮಾರ್ ಆರ್. ಸಾಧುನವರ್ ಚೇತನಾ ಸ್ವತಂತ್ರ ಪಿಯು ಕಾಲೇಜು ಹುಬ್ಬಳ್ಳಿ

ಮಹಿಮಾಕೃಷ್ಣ ವಿವಿಎಸ್ ಸರ್ದಾರ ಪಟೇಲ್ ಪಿಯು ಕಾಲೇಜು ಬೆಂಗಳೂರು

ಎಸ್.ಆರ್. ಅಪೂರ್ವ-ಸಂಕಲ್ಪ ಪಿಯು ಕಾಲೇಜು ಬಳ್ಳಾರಿ

ಶ್ರೇಯಸ್ ಎಸ್. ಪ್ರೆಸೆಡೆನ್ಸಿ ಪಿಯು ಕಾಲೇಜು ತುಮಕೂರು ಜಿಲ್ಲೆ ಸಿರಾ.

 

ಬಿಎಸ್ಸಿ ಪಶು ಸಂಗೋಪನೆ

ವಿನಿತ್ ಮೆಜರ್ ಎಕ್ಸ್‍ಪರ್ಟ್ ಪಿಯು ಕಾಲೇಜು ವಲಾಟಿಲಿ ಮಂಗಳೂರು

ಎಸ್.ಆರ್. ಅಪೂರ್ವ ಸಂಕಲ್ಪ ಪಿಯು ಕಾಲೇಜು ಬಳ್ಳಾರಿ

ಆದಿತ್ಯ ಚಿದಾನಂದ್ ಈಶ್ವರ್‍ಲಾ ಶ್ರೀ ಕುಮಾರೆನ್ಸ್ ಚಿಲ್ಡ್ರನ್ಸ್ ಹೋಂ ಬೆಂಗಳೂರು

ವೈಷ್ಣವಿ ಪಿ.ಜೆ.  ಎಕ್ಸ್‍ಪರ್ಟ್ ಪಿಯು ಕಾಲೇಜು ವಲಾಟಿಲಿ ಮಂಗಳೂರು

ಶ್ರೇಯಸ್ ಎಸ್.- ಪ್ರೆಸಿಡೆನ್ಸಿ ಪಿಯು ಕಾಲೇಜು ತುಮಕೂರು ಜಿಲ್ಲೆ ಸಿರಾ.

 

ಬಿಫಾರಂ-ಡಿಫಾರಂ ಟಾಪ್ 5

ತುಹೀನ್ ಗಿರಿನಾಥ್ ನಾರಾಯಣ ಇ ಟೆಕ್ನೋ ಸ್ಕೂಲ್ ಬೆಂಗಳೂರು

ಅನಿತಾ ಜೇಮ್ಸ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ಬೆಂಗಳೂರು.

ಎಂ. ಯೋಗೀಶ್ ಮಾದವರೆಡ್ಡಿ ನಾರಾಯಣ ಪಿಯು ಟೆಕ್ನೋ ಸ್ಕೂಲ್ ಬೆಂಗಳೂರು.

ದಾಬಾಶೋ ಸನ್ಯಾಸಿ-ಜಿಂದಾಲ್ ವಿದ್ಯಾಮಂದಿರ ಬಳ್ಳಾರಿ

ನಾರಾಯಣಪೈ-ಶಾರದಾ ಸ್ವತಂತ್ರ ಪಿಯು ಕಾಲೇಜು ದಕ್ಷಿಣಕನ್ನಡ

ಇಂದು ಮಧ್ಯಾಹ್ನ 3 ಗಂಟೆ ಬಳಿಕ ಸಿಇಟಿ ಫಲಿತಾಂಶ

 

http://cet.kar.nic.in., http://cet.kar.nic.in, http:// kar result.in. nicನಲ್ಲಿ

ಫಲಿತಾಂಶ ಪ್ರಕಟಿಸಲಾಗುವುದು ಎಂದು ಹೇಳಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ